ಗೋಕಾಕ ಸಂತ್ರಸ್ತರಿಗೆ ಸಾಂತ್ವನ ಹೇಳಿದ ರಾಹುಲ್ ಜಾರಕಿಹೊಳಿ
- 15 Jan 2024 , 2:35 AM
- Belagavi
- 146
ಗೋಕಾಕ: ಭೀಕರ ಮಳೆಗೆ ಘಟಪ್ರಭಾ ನದಿ ತೀರದ ಕೊಣ್ಣೂರಲ್ಲಿನ ಕೆಲವು ಪ್ರದೇಶಗಳು ಪ್ರವಾಹಕ್ಕೆ ತುತ್ತಾಗಿದ್ದು, ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಇಂದು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು.

ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ರಾಹುಲ್ ಜಾರಕಿಹೊಳಿ ಅವರು ಮರಡಿಮಠದ ಸ್ವಾಮೀಜಿಗಳನ್ನು ಭೇಟಿ ಪ್ರವಾಹದ ಬಗ್ಗೆ ವಿಚಾರಿಸಿದರು. ಕೊಣ್ಣೂರ ಪಟ್ಟಣದ ಬಸವನಗರ, ಕುಂಬಾರಗಲ್ಲಿಗಳಿಗೆ ಭೇಟಿ ನೀಡಿ ಜನರ ಕುಂದುಕೊರತೆ ಆಲಿಸಿದರು. ಜನರಿಗೆ ಧೈರ್ಯ ತುಂಬಿ, ನಾವು ನಿಮ್ಮೊಂದಿಗೆ ಸದಾ ಇರುತ್ತೆವೆ. ಈಗ ಮಳೆ ಕಡಿಮೆಯಾಗಿದ್ದು, ಪ್ರವಾಹ ಮಟ್ಟ ಕಡಿಮೆಯಾಗುತ್ತಿದೆ.

ಇಂದು ಸಂಪೂರ್ಣ ನೀರಿನ ಮಟ್ಟ ಕಡಿಮೆಯಾಗಿದ್ದು, ಯಾರು ಹೆದರುವ ಅಗತ್ಯವಿಲ್ಲ. ಧೈರ್ಯದಿಂದ ಇರಿ ಎಂದು ಆತ್ಮವಿಶ್ವಾಸ ತುಂಬಿದರು.ಅದಲ್ಲದೆ ಮಳೆ ಸಂದರ್ಭದಲ್ಲಿ ಎಲ್ಲಾ ನೀರು ಕಲುಷಿತವಾಗುವುದು ಸಹಜ. ನೀರನ್ನು ಕಾಯಿಸಿ ಆರಿಸಿ ಕುಡಿಯಿರಿ. ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ವೈದ್ಯರ ಸಲಹೆ ಮೆರೆಗೆ ಮಾತ್ರೆಗಳನ್ನು ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.
ಕಾಂಗ್ರೆಸ್ಕಚೇರಿಗೆಭೇಟಿ:
ನಂತರ ಕೊಣ್ಣೂರಲ್ಲಿನ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಚರ್ಚಿಸಿದರು. ನಂತರ ಕಾರ್ಯಕರ್ತರಾದ ರಾಹುಲ್ ಬಡೇಶ ಮತ್ತು ಕಮುರುದ್ದೀನ್ ಪಿರಜಾದೆ ಮನೆಯಲ್ಲಿ ಉಪಹಾರ ಸೇವಿಸಿದರು. ಬಳಿಕ ದುಪದಾಳ ಸೇತುವೆ ಕೆಲಸವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪಾಂಡು ಮನ್ನಿಕೇರಿ, ರಮೇಶ ಪೂಜೇರಿ, ಅಪ್ಪಾಸಾಬ ನೇಗಿನಹಾಳ, ಕಲಗೌಡ ಪಾಟೀಲ, ಪ್ರವೀಣ ಗುಡ್ಡಾಕಾಯು, ಮಂಜುಳಾ ರಾಮಗಾನಟ್ಟಿ, ರಾಹುಲ್ ಬಡೆಸಗೋಳ, ಸುನೀಲ ಗುಡ್ಡಾಕಾಯು, ಕಮುರುದ್ದೀನ್ ಪಿರಜಾದೆ ಸೇರಿ ಇನ್ನಿತರರು ಹಾಜರಿದ್ದರು.










