ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ : ರಮೇಶ್ ಜಾರಕಿಹೊಳಿ
- 15 Jan 2024 , 3:06 AM
- Belagavi
- 104
ಬೆಳಗಾವಿ: ಬೆಳಗಾವಿಯ ವಿಜಯ ನಗರದಲ್ಲಿ ಗ್ರಾಮೀಣ ಭಾಗದ ನೂತನ ಬಿಜೆಪಿ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಲ ಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶಜಾರಕಿಹೊಳಿ ಕಳೆದ ಬಾರಿ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೆನೆ. ಕಳೆದ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸಲು ನಾನು ಪ್ರಯತ್ನ ಮಾಡಿದ್ದೆ ಆದರೆ ಈ ಬಾರಿ ಬಿಜೆಪಿ ಸರ್ಕಾರದಲ್ಲಿ ಹಾಗೆ ಆಗಲು ಬಿಡುವುದಿಲ್ಲ ಇದರ ಬಗ್ಗೆ ಸುರೇಶ ಅಂಗಡಿ ಜೊತೆ ಚರ್ಚಿಸಿದ್ದೇನೆ.

ಆದರೆ ಬಿಜೆಪಿ ಗ್ರಾಮೀಣ ಭಾಗದ ಅಭ್ಯರ್ಥಿ ಸಂಜಯ ಪಾಟೀಲ ಗೆ ತುಂಬಾ ಅನ್ಯಾಯ ಮಾಡಿದ್ದೇನೆ. 2023ಚುನಾವಣೆಯಲ್ಲಿಬೆಳಗಾವಿಜಿಲ್ಲೆಯಲ್ಲಿಇತಿಹಾಸಸೃಷ್ಟಿಮಾಡೋಣಎಂದರು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡುವ ತಾಕತ್ತು ಬಿಜೆಪಿ ಕಾರ್ಯಕರ್ತರಲ್ಲಿ ಇದೆ ಬೆಳಗಾವಿ ಗ್ರಾಮೀಣ ಭಾಗದ ಶಾಸಕಿಲಕ್ಷ್ಮೀಹೆಬ್ಬಾಳಕರ ಚುನಾವಣೆಯಲ್ಲಿ ಗೆದ್ದಿದ್ದು ಕುಕ್ಕರ್ ಕೊಟ್ಟಿದ್ದರಿಂದವ ಹಾಗೂ ನನ್ನ ದುಡ್ಡಿನಿಂದ ಅದು ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆಯಂತೆ ಆಯಿತು ಸ್ಥಳೀಯ ಶಾಸಕರಿಗೆ ಹಣದ ಅಹಂಕಾರ ಹೆಚ್ಚು ಇದೆ ಎಂದು ರಮೇಶ ಜಾರಕಿಹೊಳಿಯವರು ಶಾಸಕಿ ಲಕ್ಷ್ಮೀ ಹೆಬ್ಬಾಳಕರಗೆ ಮಾತಿನ ಮೂಲಕ ಟಾಂಗ್ ನೀಡಿದರು.











