ಆರ್ ಸಿಯು ಪರೀಕ್ಷೆ ಮುಂದೂಡುವಂತೆ ವಿದ್ಯಾರ್ಥಿಗಳ ಒತ್ತಾಯ

ಬೆಳಗಾವಿ: ಪ್ರವಾಹ ಹಿನ್ನೆಲೆ ಜುಲೈ 26ಕ್ಕೆ ನಡೆಯಬೇಕಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪರೀಕ್ಷೆಗಳನ್ನು ಅಗಸ್ಟ್ 2 ಕ್ಕೆ ಮುಂದೂಡಲಾಗಿತ್ತು ಆದರೆ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಒಂದು ದಿನವು ಬಿಡುವಿಲ್ಲದೆ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ ಅದರಲ್ಲು ಯುಜಿಸಿ ಗೈಡ್ ಲೈನ್ ಅನ್ನು ಪರಿಶೀಲಿಸದೆ 3 ಸೆಮಿಸ್ಟರ್ ಹಾಗು 4 ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಅಗಸ್ಟ್ ಸೆಪ್ಟೆಂಬರ ನಲ್ಲಿ ನಡೆಸುತ್ತಿದ್ದಾರೆ ಈ ರೀತಿ ಪರೀಕ್ಷೆಗಳನ್ನು ನಡೆಸಿದರೆ ವಿದ್ಯಾರ್ಥಿಗಳಿಗ ತೊಂದರೆ ಆಗಲಿದೆ ಇದನ್ನು ಆಗ್ರಹಿಸಿ ಆರ್ ಸಿ ಯು ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

promotions

UGC ಗೈಡ್ ಲೈನ್ ಪ್ರಕಾರ ಪರೀಕ್ಷೆಗಳನ್ನು ಪ್ರಮೊಟ ಮಾಡಿ ಎಂದು ರಾಣಿ ಚೆನ್ನಮ್ಮ ವಿವಿಯ ಎದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಕಳೆದ ಕೆಲ ದಿನಗಳಿಂದ ರಾಜ್ಯಾಧ್ಯಂತ ದೊಡ್ಡ ಪ್ರಮಾಣದಲ್ಲಿ ಮಳೆ ಆಗುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ಉದ್ಭವವಾಗಿದೆ ಹಾಗೂ ದೂರದ ಊರುಗಳಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬರುತ್ತಾರೆ ಅದರಲ್ಲು ಒಂದೂ ದಿನ ಬಿಡುವಿಲ್ಲದೆ ಪರೀಕ್ಷೆಗಳನ್ನು ನಡೆಸುತ್ತಿರುವದು ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ ಹೀಗಾಗಿ ಅಗಸ್ಟ್ 2 ಪರೀಕ್ಷೆಗಳಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ. ಇದನ್ನು ಖಂಡಿಸಿ ವಿವಿ ಎದುರು ಪ್ರತಿಭಟಿಸಿ ಮನವಿ ಸಲ್ಲಿಸಲಾಯಿತು.

promotions

Read More Articles