ಕೊರೋನಾ ನಿಯಮಗಳನ್ನು ಪಾಲಿಸಿ, ಆದೇಶ ಮೀರಿ ವರ್ತಿಸಿದರೆ ಅವರ ವಿರುದ್ಧ ಕಠಿಣ ಕ್ರಮ
- 14 Jan 2024 , 11:22 PM
- Belagavi
- 143
ಬೆಳಗಾವಿ: ಜಿಲ್ಲೆಯಲ್ಲಿ ಕರೋನಾ ವೈರಸ್ ಮಾಹಾಮಾರಿಯಿಂದ ದಿನದಿಂದ ದಿನಕ್ಕೆ ಸೋಂಕಿತರು ಸಂಖ್ಯೆ ಏರಿಕೆಯಾಗುತ್ತಿದೆ ಈ ಸಂಬಂಧ ಸಾರ್ವಜನಿಕರು ಕಟ್ಟು ನಿಟ್ಟಿನ ಸರ್ಕಾರದ ಕ್ರಮಗಳನ್ನು ಪಾಲಿಸಬೇಕು . ಸಾವರ್ಜನಿಕ ಸ್ಥಳಗಳಲ್ಲಿ ಅಂತರ ಕಾಪಡಿಕೊಂಡು ವ್ಯವಹರಿಸಬೇಕು. ಹೊರಗಡೆ ಹೋಗುವಾಗ ಮಾಸ್ಕ್ ಧರಿಸಿರಬೇಕು. ಯಾರಾದರೂ ಆದೇಶ ಮೀರಿ ವರ್ತಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತಿ ಸಿಬ್ಬಂದಿಯವರಿಗೆ ಕಾಗವಾಡ ಪೋಲಿಸ್ ಠಾಣೆಯ ಪಿ.ಎಸ್.ಐ. ಹಣಮಂತ ಧರ್ಮಟ್ಟಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ತಾಲೂಕಿನ ಜುಗೂಳ ಗ್ರಾಮದಲ್ಲಿ ನಿನ್ನೆ ಓರ್ವ ಮಹಿಳೆಗೆ ಕರೋನಾ ಪ್ರಕರಣ ಪತ್ತೆಯಾಗಿದ್ದು ಮುಂಜಾಗ್ರತೆ ಕ್ರಮವಾಗಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಮಾತನಾಡಿದ ಅವರು ಮಹಾರಾಷ್ಟ್ರದಿಂದ ಪರವಾನಿಗೆ ಇಲ್ಲದೇ ಬರುವವರ ಮೇಲೆ ನಿಗಾ ಇಡಲು ಹಾಗೂ ಸಾರ್ವಜನಿಕರು ಕೂಡಲೇ ಪೊಲೀಸರನ್ನು ಸಂಪರ್ಕಿಸಿ ಎಂದು ಹೇಳಿದ್ದಾರೆ, ಆದೇಶ ಪಾಲಿಸದೇ ಇರವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,ಗ್ರಾಮದಲ್ಲಿ ಸಂಶಯಾಸ್ಪದ ಒಟ್ಟು 6 ಜನರ ಸ್ಟ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿದ್ದು ಪ್ರಥಮ ಸಂಪರ್ಕಕ್ಕೆ ಬಂದವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.

ಅಲ್ಲದೇ ಕರೋನಾ ಪ್ರಕರಣ ಪತ್ತೆಯಾಗಿದ್ದ ಕನ್ನಡ ಗಂಡು ಮಕ್ಕಳ ಮಾದರಿ ಶಾಲೆಯ ಅಕ್ಕ ಪಕ್ಕದ ಓಣಿಗಳನ್ನು ಸಿಲ್‌ಡೌನ್ ಮಾಡಲಾಗಿದೆ ಎಂದು ತಾಲೂಕಾ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಪಿ.ಎಸ್.ಐ. ಅವರು ಮಹಾರಾಷ್ಟ್ರಕ್ಕೆ ಸಂಪರ್ಕಿಸುವ ರಸ್ತೆಗಳಿಗೆ ಭೇಟಿ ನೀಡಿ, ರಸ್ತೆಗಳನ್ನು ಬಂದ ಮಾಡಿದರು. ಈ ಸಂಧರ್ಭದಲ್ಲಿ ಕಾಗವಾಡದ ವೈದ್ಯಾಧಿಕಾರಿ ಡಾ.ಪುಷ್ಪಲತಾ ಸುನ್ನದಕಲ್ಲ, ಶಿರಗುಪ್ಪಿಯ ಡಾ.ಸೌಮ್ಯಾ ಚೌಗುಲೆ, ಉಪತಹಶೀಲ್ದಾರ ವಿಜಯಕುಮಾರ ಚೌಗುಲೆ, ಪಿ.ಡಿ.ಓ ಅನೀಲ ಸಂತೆ, ಗ್ರಾ.ಪಂ. ಅಧ್ಯಕ್ಷ ಸಂಜಯ ಮಿಣಚೆ, ಅರುಣ ಗಣೇಶವಾಡಿ, ಅನೀಲ ಸುಂಕೆ, ಸುರೇಶ ಪಾಟೀಲ, ಬಾಬಾಸಾಬ ಪಾಟೀಲ, ದಾದಾ ಅಂಬಿ ಸೋಮಶೇಖರ ಜೋರೆ, ಪೋಲಿಸ್ ಸಿಬ್ಬಂದಿ, ಆರ್.ಎಲ್ ಹೊರಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.










