ರಾಣಿ ಚನ್ನಮ್ಮನ ನಾಡಿನಿಂದ ಮಂತ್ರಿಯಾಗಿದ್ದೇನೆ ಹಗಲಿರುಳು ಸೇವೆ ಮಾಡುವೆ: ಸಚಿವೆ ಜೊಲ್ಲೆ

ಬೆಳಗಾವಿ : ವೀರ ರಾಣಿ ಕಿತ್ತೂರು ಚೆನ್ನಮ್ಮನ ನಾಡಿನಿಂದ ರಾಜ್ಯದಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಲು ಮಹಿಳೆಯಾಗಿ ನನಗೆ ಸಿಕ್ಕ ಅವಕಾಶವನ್ನು ಜನಸೇವೆಗಾಗಿಯೆ ಹಗಲಿರುಳು ಶ್ರಮ ಪಡುತ್ತೆನೆಂದು ಮಹಿಳಾ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

promotions

ನಗರದ ಆರ್.ಪಿ.ಡಿ.ಅವರ ತ್ತದಲ್ಲಿರುವ ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಕಛೇರಿಗೆ ನೂತನ ಸಚಿವರಾದ ಪ್ರಯುಕ್ತ ಬೆಟ್ಟಿ ನೀಡಿ ಜಿಲ್ಲಾ ಘಟಕದ ಸತ್ಕಾರ ಸ್ವೀಕರಿಸಿ ಮಾತನಾಡಿ, ಚೆನ್ನಮ್ಮನ ನಾಡಿನ ಜನರ ಆರ್ಶಿವಾದ ಪಕ್ಷದ ಕಾರ್ಯಕರ್ತರ ಪರಿಶ್ರಮದಿಂದ ಜನರ ಸೇವೆ ಮಾಡಲು ಮತ್ತೊಮ್ಮೆ ಮಂತ್ರಿಯಾಗಿ ತಮ್ಮ ಮುಂದೆ ನಿಂತಿದ್ದೆನೆ.

promotions

ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ವಹಿಸಿಕೊಡುವ ಯಾವುದೆ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ನಿಭಾಯಿಸುತ್ತೆನೆಂದರು. ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಜಿಲ್ಲೆಯಿಂದ ರಾಜ್ಯದ ಏಕೈಕ ಮಹಿಳಾ ಮಂತ್ರಿಯಾಗಿರುವ ಶಶಿಕಲಾ ಜೋಲ್ಲೆ ರಾಜ್ಯದ ಜನತೆಗೆ ಎರಡು ವರ್ಷ ಉತ್ತಮ ಸೇವೆ ಸಲ್ಲಿಸಿದ ಫಲವಾಗಿ ಮತ್ತೊಮ್ಮೆ ಮಂತ್ರಿಯಾಗಿರುವದು ಹೃಷ ತಂದಿದೆ ಎಂದರು. ಮುಂಬರುವ ದಿನಗಳಲ್ಲಿ ಜಿಲ್ಲೆಯ ಜನತೆಯ ಅಶೋತ್ತರಕ್ಕೆ ಸ್ಪಂದಿಸಿ ಒಳ್ಳೆಯ ಕೆಲಸ ಮಾಡಿ ರಾಜ್ಯ ಅಭಿವೃದ್ಧಿಗೆ ಶ್ರಮಿಸಲಿ ಎಂದರು.

ಈ ಸಂದರ್ಭದಲ್ಲಿ ಚಿಕ್ಕೊಡಿ ಸಂಸದ ಅಣ್ಣಾ ಸಾಹೇಬ ಜೋಲ್ಲೆ ಜಿಲ್ಲಾ ಉಪಾಧ್ಯಕ್ಷ ಯುವರಾಜ ಜಾಧವ, ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ, ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ, ವಕ್ತಾರ ಸಂಜಯ ಕಂಚಿ, ಸಾಮಾಜಿಕ ಜಾಲತಾಣದ ಸಂಚಾಲಕ ನೀತಿನ ಚೌಗಲೆ, ಸಂತೋಷ ದೇಶನೂರ, ಕಾರ್ಯಾಲಯ ಕಾರ್ಯದರ್ಶಿ ವೀರಭದ್ರಯ್ಯ ಪೂಜಾರ, ಡಾ.ಸೋನಾಲಿ ಸೋನಾಭರ್ತ, ಶಿಲ್ಪಾ ಗೋಡಿಗೌಡರ, ಶಾಂತಾ ಮಡ್ಡಿಕರ, ಯಲ್ಲೇಶ ಕೋಲಕಾರ, ಚೇತನಾ ಅಗಸಿಕರ, ಪ್ರೀಯಾಂಕಾ ಅಜ್ರೇಕಾರ, ಶ್ವೇತಾ ಜಗದಾಳೆ, ಅಭಯ ಅವಲಕ್ಕಿ, ಸುದರ್ಶನ ಪಾಟೀಲ ಮುಂತಾದವರು ಇದ್ದರು.

Read More Articles