ಹಿರಿಯ ಪತ್ರಕರ್ತನ ನಿಧನಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಸಂತಾಪ
- 15 Jan 2024 , 5:06 AM
- Bengaluru
- 107
ಹಿರಿಯ ಪತ್ರಕರ್ತ ಎಸ್.ಚಂದ್ರಶೇಖರ್ ರಾವ್ ಅವರ ನಿಧನಕ್ಕೆ ಮುಖ್ಯಮಂತ್ರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ತಮ್ಮ ಆಪ್ತ ವಲಯದಲ್ಲಿ ಸಾ.ಚಾ ಎಂದೇ ಖ್ಯಾತರಾಗಿದ್ದ ಚಂದ್ರಶೇಖರ್ ರಾವ್ ಅವರು, ನೇರ, ನಿಷ್ಠುರವಾದಿ ಪತ್ರಕರ್ತರಾಗಿ ತಮ್ಮದೇ ಛಾಪು ಮೂಡಿಸಿದ್ದವರು. ಅನೇಕ ಯುವ ಪ್ರತಿಭೆಗಳನ್ನು ಪತ್ರಿಕಾರಂಗಕ್ಕೆ ಪರಿಚಯಿಸಿದ್ದರು.

ಅವರ ನಿಧನದಿಂದ ಪತ್ರಿಕೋದ್ಯಮ ವಲಯದ ಪ್ರಮುಖರೊಬ್ಬರನ್ನು ಕಳೆದುಕೊಂಡಂತಾಗಿದೆ. ಭಗವಂತ ಮೃತರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.










