ಇಂದು ಸಿರಿಧಾನ್ಯ ಒಂದು ಚಳುವಳಿಯಾಗಿದೆ : ಸರಜು ಕಾಟ್ಕರ

ಬೆಳಗಾವಿ: ಜನರು ಸಾವಯವ ಮತ್ತು ಸಿರಿಧಾನ್ಯಗಳ ಬಗ್ಗೆ ಈಗ ಜಾಗೃತರಾಗುತ್ತಿದ್ದಾರೆ. ಅದು ಒಂದು ಚಳುವಳಿಯ ಸ್ವರೂಪ ಪಡೆದಿದೆ ಎಂದು ಹಿರಿಯ ಸಾಹಿತಿ ಮತ್ತು ಪತ್ರಕರ್ತ ಡಾ. ಸರಜೂ ಕಾಟ್ಕರ ಅವರು ಹೇಳಿದರು.

promotions

ನಗರದ ಜರುಗಿದ ಮನೆ ಮನೆಯಲ್ಲಿ ವಚನೋತ್ಸವ ಕಾರ್ಯಕ್ರಮವನ್ನು ಮತ್ತು ಸಿರಿಧಾನ್ಯ ಮಾರಾಟ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಈಗಿನ ಜನರಿಗೆ ಶುದ್ಧ ಆಹಾರವು ಅಲರ್ಜಿ ಆಗುವಷ್ಟರ ಮಟ್ಟಿಗೆ ಅವರು ಆಶುದ್ದ ಆಹಾರಕ್ಕೆ ಒಗ್ಗಿಕೊಂಡಿದ್ದಾರೆ.

promotions

ಆದರೂ ಸಹ ಈಗ ಆರೋಗ್ಯ ಶುದ್ದ ಆಹಾರ, ಸಾವಯವ ಕೃಷಿ ಆಹಾರ, ಸಿರಿಧಾನ್ಯಗಳ ಬಗ್ಗೆ ಜಾಗೃತರಾಗುತ್ತಿದ್ದಾರೆ ಎಂದರು. ಬಸವ ತತ್ವ ಎಲ್ಲರಿಗೂ ಮುಟ್ಟಬೇಕು, ಮನೆ ಮನೆಗೂ ಮುಟ್ಟಬೇಕು ಎಂದ ಸರಜೂ ಕಾಟ್ಕರ ಅವರು ಕಲ್ಯಾಣರಾವ ಮುಚಳಂಬಿಯವರು ತಮ್ಮ ಹೆಸರಿನಂತೆ ಕಲ್ಯಾಣ ನಾಡಿನಿಂದ ಬಂದು ಕಲ್ಯಾಣ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದರು.

ವಚನಗಳ ಬಗ್ಗೆ ಉಪನ್ಯಾಸ ನೀಡಿದ ಸುನಂದಾ ಎಮ್ಮಿ ಅವರು, ಯಾವ ಕಾಯಕ ಮಾಡಿದರೆನು, ಭಾವ ಮತ್ತು ಮನಸ್ಸು ಶುದ್ದವಾಗಿರಬೇಕು, ಆಗ ದೇವರೂ ಸಹ ಅದಕ್ಕೆ ಕೈಜೋಡಿಸುತ್ತಾನೆ ಎಂದು ನೂಲಿನ ಚಂದಯ್ಯ ಅವರ ಕಥೆಯ ಮೂಲಕ ವಚನವನ್ನು ವಿವರಿಸಿದ ಅವರು ವಚನಗಳಿಂದ ಸಮಾಜದಲ್ಲಿ ಮಾಡಬಹುದಾದ ಬದಲಾವಣೆಯನ್ನು ವಿವರಿಸಿದರು.

ಆಶಿರ್ವಚನ ನೀಡಿದ ಕಾರಂಜಿ ಮಠದ ಶ್ರೀ ಗುರುಸಿದ್ದ ಮಹಾಸ್ವಾಮಿಗಳು ಮತ್ತು ಕಾಡಸಿದ್ದೇಶ್ವರ ಮಠದ ಮುಪ್ಪಿನ ಕಾಡಸಿದ್ದೇಶ್ವರ ಸ್ವಾಮಿಗಳು ಮನೆ ಮನೆಯಲ್ಲಿ ವಚನೋತ್ಸವ ಕಾರ್ಯಕ್ರಮದಿಂದ ಮಕ್ಕಳಲ್ಲಿ ಉತ್ತಮ ಸಂಸ್ಕಾರ ವೃದ್ಧಿಯಾಗುತ್ತದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಜನರಲ್ಲಿ ಶರಣರ ವಚನಗಳನ್ನು ಬಿತ್ತುವುದು ..(6ನೇ ಪುಟಕ್ಕೆ) (1ನೇ ಪುಟದಿಂದ) ಅವಶ್ಯಕವಾಗಿದೆ ಎಂದರು.

ಕಾರ್ಯಕ್ರಮದ ಆಧ್ಯಕ್ಷತೆವಹಿಸಿದ್ದ ಕಲ್ಯಾಣರಾವ ಮುಚಳಂಬಿಯವರು ಮಾತನಾಡಿ, ಮನೆ ಮನೆಯಲ್ಲಿ ವಚನೋತ್ಸವ ಕಾರ್ಯಕ್ರಮವನ್ನು ಸುಮಾರು 30 ವರ್ಷಗಳಿಂದ ನಡೆದುಕೊಂಡು ಬಂದಿದೆ. ಇಂದು ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಲು ವಚನಗಳು ಸಹಕಾರಿಯಾಗಲಿವೆ ಎಂದು ಹೇಳಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಾಹಿತಿ ಮತ್ತು ಪತ್ರಕರ್ತರಾದ ಭೀಮಸೇನ ತೋರಗಲ್ಲ ಮತ್ತು ಎಲ್.ಎಸ್.ಶಾಸ್ತ್ರೀ ಅವರು ಮಾತನಾಡಿ ಶುಭಕೊರಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಎಮ್.ವಾಯ್. ಮೇಣಸಿನಕಾಯಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಮಾಜಿ ಮಹಾಪೌರ ಎನ್.ಬಿ.ನಿರ್ವಾಣಿ, ಮಾಜಿ ಸಚಿವ ಎ.ಬಿ.ಪಾಟೀಲ, ಬಿ.ಎಸ್. ಗವಿಮಠ, ಶ್ರೀಮತಿ. ರತ್ನ ಪ್ರಭಾ ಬೆಲ್ಲದ, ಶ್ರೀಮತಿ. ಶಾಂತಾ ಮಸೂತಿ, ಶೈಲಜಾ ಭಿಂಗೆ, ಎಸ್. ಎಸ್. ಪಾಟೀಲ, ಮಲ್ಲಿಕಾರ್ಜುನ ವಾಲಿ, ಗಂಗಣ್ಣ ಗಣಾಚಾರಿ ಸ.ರಾ.ಸುಳಕೂಡೆ, ಶ್ರೀಮತಿ. ಆಶಾ ಯಮಕನಮರಡಿ, ಕರಗರ, ಎಫ್.ವ್ಹಿ.ಮಾನಿ ಆಗಮಿಸಿದ್ದರು. ಕಾರ್ಯಕ್ರಮವನ್ನು ವ್ಹಿ.ಎಮ್. ಅಂಗಡಿ ಮತ್ತು ಸಿ.ಎಂ. ಬೂದಿಹಾಳ ನಿರೂಪಿಸಿದರು. ಜೋಶಿಯವರು ಪ್ರಾರ್ಥನೆ ಹಾಡಿದರು. ಸಂಪತ್‌ಕುಮಾರ ಮುಚಳಂಬಿ ಸ್ವಾಗತ ಮಾಡಿದರು.

Read More Articles