ಕುಮಾರಸ್ವಾಮಿ ಬಗ್ಗೆ ಬಿಜೆಪಿ ಸಾಫ್ಟ್ ಕಾರ್ನರ್ ಬಗ್ಗೆ ಸಚಿವ ಈಶ್ವರಪ್ಪ ಹಿಂಗಂದ್ರು

ಬೆಳಗಾವಿ:ಕುಮಾರಸ್ವಾಮಿ ಅವರನ್ನು ಕರೆದುಕೊಂಡು ಬಂದು ಹೊಡಿಯೋಕೆ ಆಗುತ್ತಾ. ಅವರ ಬಗ್ಗೆ ಬಿಜೆಪಿ ಸಾಫ್ಟ್ ಕಾರ್ನರ್ ಆಗಿದ್ದು ಯಾಕೆ ಎಂದು ಮಾಧ್ಯಮದವರ ಪ್ರಶ್ನಗೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

promotions

ಅವರು ಬುಧವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

promotions

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಸರಿಯಾಗಿ ಅಧಿಕಾರ ನಡೆಸಲಿಲ್ಲ. ಜನಪರ ಯೋಜನೆ ನೀಡಿದ್ದರೇ ಅವರೇ ಮತ್ತೇ ಅಧಿಕಾರಕ್ಕೆ ಬರುತ್ತಿದ್ದರು. ಈಗಲೂ ಮುಖ್ಯಮಂತ್ರಿಯಾಗುವೆ ಎನ್ನು ಕನಸಿನಲ್ಲಿದ್ದಾರೆ,. ಡಿ.ಕೆ.ಶಿವಕುಮಾರ ನಡುವೆ ಕಿತ್ತಾಟ ಆರಂಭವಾಗಿದೆ.ಈ ಜನುಮದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ನಡೆಯಿರಿ ಎಂದರು.

ಸರಕಾರ ರಚನೆ ಮಾಡಿದ ಸಂದರ್ಭದಲ್ಲಿ ಕೆಲವರಿಗೆ ಅಸಮಾಧಾನ ಸಹಜ. ಬಿಜೆಪಿಗೆ ಪೂರ್ಣ ಬಹುಮತದ ಅಧಿಕಾರ ಜನ ಕೊಡಲಿಲ್ಲ. ಆದರೆ ಅಧಿಕಾರ ನಡೆಸಿ ಎಂದರು. ಎರಡು ಮೂರು ವಿಚಾರದಲ್ಲಿ ಆನಂದ ಸಿಂಗ್ ಅಸಮಾಧಾನವಾಗಿದ್ದಾರೆ ಎಂದು ತಿಳಿದುಕೊಂಡಿದ್ದೇನೆ. ಅದನ್ನು ಸಿಎಂ ಬಗೆ ಹರಿಸುತ್ತಾರೆ ಎಂದರು.

Read More Articles