ಜೈ..ಜೈ.. ಭಜರಂಗಿ..

ಬೈಲಹೊಂಗಲ: 75ನೇ ವರ್ಷದ ಆಜಾದಿ ಅಂದೋಲನದ ನಿಮಿತ್ಯ ರನ್ ಪಾರ್ ಯುನಿಟಿ ಘೋಷಣೆಯಡಿಯಲ್ಲಿ ಸಮೀಪದ ಹೊಸೂರ ಗ್ರಾಮದ ಭಜರಂಗಿ ಬಾಯ್ಸ್ ಯುವಕರ ತಂಡ ಶುಕ್ರವಾರ ಮುಕ್ತ ರಸ್ತೆ ಓಟದ ಸ್ಪರ್ಧೆ ಆಯೋಜಿಸಿದ್ದರು. ಸ್ಪರ್ಧೆಯಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಕೊಲಾರ, ಎಚ್.ಡಿ ಕೋಟೆ, ಬೆಂಗಳೂರು ಹಾವೇರಿ, ಬಾಗಲಕೋಟ ಹಾಗೂ ರಾಜ್ಯದ ನಾನಾ ಭಾಗಗಳಿಂದ 140 ಕ್ಕು ಹೆಚ್ಚಿನ ಓಟಗಾರು ಆಗಮಿಸಿ ಸ್ಪರ್ಧೆಗೆ ಕಳೆ ತುಂಬಿದರು.

promotions

ಅತ್ಯಂತ ವ್ಯವಸ್ಥಿತವಾಗಿ ನಡೆದ ಓಟದ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳಿಗೆ ಚೆಸ್ಟ್ ನಂ ನೀಡಿ ಅವರ ಭಾವಚಿತ್ರ ತಗೆದು ಸಂಪೂರ್ಣ ಓಟವನ್ನು ಚಿತ್ರಿಕರಿಸಿ ಯಾವುದೆ ಲೊಪದೋಷವಾಗದಂತೆ ಎಚ್ಚರವಹಿಸಲಾಗಿತ್ತು. ನ್ಯಾಯವಾದಿ ಎಫ್.ಎಸ್‌.ಸಿದ್ದನಗೌಡರ ಈ ಓಟದ ಸ್ಪರ್ಧೆಯನ್ನು ಉದ್ಘಾಟನೆಗೊಳಿಸಿ ಮಾತನಾಡಿ, ಯುವಕರಲ್ಲಿ ಕ್ರೀಡಾ ಸ್ಪೂರ್ತಿತುಂಬುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದು ಯುವಕರಲ್ಲಿ ದೆಹ ದೃಢತೆ ಹೆಚ್ಚಿಸಿಕೊಳ್ಳಲು ಇದೊಂದು ಗ್ರಾಮೀಣ ಯುವಕರಿಗೆ ಪ್ರೇರಣೆಯಾಗಿದೆ ಎಂದರು.

promotions

ಉಪನ್ಯಾಸಕ ಎಸ್‌.ಕೆ.ಮೆಳ್ಳಿಕೇರಿ ಹಾಗೂ ಮಾಜಿ ತಾಪಂ ಸದಸ್ಯ ಜಗದೀಶ್ ಬೂದಿಹಾಳ ಮಾತನಾಡಿ, ಕೊವಿಡ್ ಸಂದರ್ಭದಲ್ಲಿ ಇಂದಿನ ಯುವಕರು ಹೊರಾಂಗಣ ಕ್ರೀಡೆಗೆ ಮಹತ್ವ ನೀಡದೆ ಮೊಬೈಲ್ ಗಳಲ್ಲಿ ಕಾಲ ಕಳೆಯುವದನ್ನು ಬಿಟ್ಟು ದೇಶ ಕಾಯೊ ಯೋಧರನ್ನು ಆಯ್ಕೆ ಮಾಡಲು ಇರುವ ದೈಹಿಕ ಪರಿಕ್ಷೇಗಳಿಗೆ ಇದೊಂದು ಉತ್ತಮ ತಯಾರಿಯಾಗಿದ್ದು ಗ್ರಾಮಿಣ ಮಟ್ಟದಲ್ಲಿ ರಾಜ್ಯದ ನಾನಾ ಭಾಗಗಳಿಂದ ಓಟಗಾರರು ಆಗಮಿಸಿದ್ದು ಯುವಕರಲ್ಲಿ ನವ ಚೈತನ್ಯ ಮುಡಿಸಿದೆ ಎಂದರು. ಕಾರ್ಯಕ್ರಮದಲ್ಲಿ ಗೌಡಪ್ಪ ಹೊಸಮನಿ,ಮಲ್ಲಿಕಾರ್ಜುನ ವಕ್ಕುಂದ, ಮಂಜು ಬುಡಶೆಟ್ಟಿ, ಮೋಹನ ವಕ್ಕುಂದ, ಮುನೀರ ಶೇಖ, ದಿಲಾವಾರ, ಬಸವರಾಜ ವಿವೇಕಿ, ದೂಪದಾಳ,ನವೀಣ ಗಣಾಚಾರಿ, ಸುನೀಲ ಪಾಟೀಲ, ವಿದ್ಯಾನಂದ ಬೋಳೆತ್ತಿನ, ಪ್ರದೀಪ ವಕ್ಕುಂದ, ದರ್ಶನ ಬೋಳೆತ್ತಿನ, ಸುರೇಶ ವಕ್ಕುಂದ, ಸೋಮಪ್ಪ ಕಮತಗಿ, ಅಜ್ಜಪ್ಪ ಸಂಗೊಳ್ಳಿ, ವಿನಾಯಕ ಹುರಕಡ್ಲಿ, ಶಶಿಧರ ಕಲ್ಯಾಣಮಠ, ಶಿವಕುಮಾರ ಸೊಗಲ, ಅಶೋಕ ಸೊಗಲ, ಸೊಮಪ್ಪ ವಕ್ಕುಂದ, ಕಿರಣ ಮೂಗಬಸವ, ಮಡಿವಾಳಪ್ಪ ಶಿದ್ನಾಳ, ಮಂಜು ಹಪ್ಪಳಿ ಇತರರು ಇದ್ದರು

Read More Articles