ಜಿಪಂ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾದರು ಒಗ್ಗಟ್ಟಿನಿಂದ ಕೆಲಸ ಮಾಡಿ: ಕಳ್ಳಿ

ಬೈಲಹೊಂಗಲ: ಮುಂಬರುವ ಜಿಲ್ಲಾ ಹಾಗೂ ತಾಲೂಕಾ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಯಾರೇ ಅಭ್ಯರ್ಥಿಯಾದರು ಅವರನ್ನು ಗೆಲ್ಲಿಸುವ ಕಾರ್ಯ ಕಾರ್ಯಕರ್ತರಿಂದ ನಡೆಯಬೇಕು ಪಕ್ಷಕ್ಕೆ ವಿರೊಧಮಾಡುವವರ ಹೆತ್ತತಾಯಿಗೆ ದ್ರೋಹ ಬಗೆದಂತೆ ಎಂದು ಬೆಳಗಾವಿ ಗ್ರಾ ಜಿಲ್ಲಾ ವಿಶೇಷ ಅಹ್ವಾನಿತರಾದ ಗುರುಪಾದ ಕಳ್ಳಿ ಹೇಳಿದರು.

promotions

ಪಟ್ಟಣದ ಖಾಸಗಿ ಹೊಟೆಲದಲ್ಲಿ ಮಂಗಳವಾರ ನಡೆದ ಬೈಲಹೊಂಗಲ ಬಿಜೆಪಿ ಮಂಡಳ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿ, ಬಿಜೆಪಿ ಶಿಸ್ತು ಬದ್ದ ಪಾರ್ಟಿಯಾಗಿದ್ದು ಕಾರ್ಯಕರ್ತರೆ ಪಕ್ಷಕ್ಕೆ ಬೆನ್ನೆಲಬಾಗಿದ್ದು ಅವರ ಪರಿಶ್ರಮದಿಂದ ಪ್ರತಿಯೊಬ್ಬರಿಗೂ ಅಧಿಕಾರ ದೊರೆತಿದೆ. ಪಕ್ಷ ಎಂದರೆ ಹೆತ್ತ ತಾಯಿಗೆ ಸಮಾನವಾಗಿದ್ದು ಮುಂಬರುವ ಜಿಲ್ಲಾ ಹಾಗೂ ತಾಲೂಕಾ ಪಂಚಾಯತಿ ಚುನಾವಣೆಯಲ್ಲಿ ಅಭರ್ಥಿಯನ್ನು ನೊಡದೆ ಬಿಜೆಪಿ ಪಕ್ಷದ ಪರವಾಗಿ ಪ್ರಾಮಾಣಿಕವಾಗಿ ಹಗಲಿರುಳು ದುಡಿದು ಬೆಳಗಾವಿ ಜಿಲ್ಲಾ ಪಂಚಾಯತಿ ಚುಕ್ಕಾಣಿ ಬಿಜೆಪಿ ಪಕ್ಷಕ್ಕೆ ಲಭಿಸಲಿದೆ ಎಂದರು.

promotions

ಮಾಜಿ ಶಾಸಕ ಜಗದೀಶ್ ಮೆಟಗುಡ್ ಮಾತನಾಡಿ, ರಾಜ್ಯದಲ್ಲಿಯೆ ಅತ್ಯಂತ ದೊಡ್ಡದಾದ ಜಿಲ್ಲಾ ಪಂಚಾಯತಿ ಬೆಳಗಾವಿ ಜಿಲ್ಲೆಯಲ್ಲಿದ್ದು ಅದರ ಗದ್ದುಗೆ ಬಿಜೆಪಿಗೆ ಒಲಿಯಬೇಕಾದರೆ ಈಗಿಂದಲೆ ಚುನಾವಣಾ ಕಾರ್ಯದ ಚಟುವಟಿಕೆ ಚುರುಕಾಗಲಿ. ಪಕ್ಷ ಸಂಘಟನೆಗೆ ಜಿಲ್ಲಾ ಪದಾಧಿಕಾರಿಗಳು ನೀಡುವ ಮಾರ್ಗದರ್ಶನದಲ್ಲಿ ನಾವು ನಿವೆಲ್ಲ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಜಿಪಂ ಹಾಗೂ ತಾಪಂ ಸ್ಥಾನ ಗೆಲ್ಲೊಣ ಎಂದರು.

ಓಬಿಸಿ ಮೊರ್ಚಾ ಅಧ್ಯಕ್ಷ ದುಂಡೇಶ ಗರಗದ ಶ್ಯಾಮಾ ಪ್ರಸಾದ ಮುಖರ್ಜಿ ಜೀವನ ಚರಿತ್ರೆಯ ಬಗ್ಗೆ ಮಾತನಾಡಿದರು, ಮೂರನೆ ಅವಧಿಯಲ್ಲಿ ಕರೊನಾ ಮಹಾಮಾರಿಯಲ್ಲಿ ಮಡಿದ ಪಕ್ಷದ ಕಾರ್ಯಕರ್ತರಿಗೆ ಮಂಡಳ ಯುವಮೊರ್ಚಾ ಅಧ್ಯಕ್ಷ ಈರಣ್ಣ ಬೀಡಿ ಶ್ರದ್ಧಾಂಜಲಿ ಅರ್ಪಿಸಿದರು. ನಾಲ್ಕನೆಯ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊವಿಡ್ ಸಂದರ್ಭವನ್ನು ನಿರ್ವಹಿಸಿದ ಬಗ್ಗೆ ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ ಮಾತನಾಡಿದರು.

ಸಂಘಟನಾತ್ಮಕ ವಿಷಯದ ಬಗ್ಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಮೊಹಿತೆ ಮಾತನಾಡಿದರು. ವೇದಿಕೆಯ ಮೇಲೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಕಾರ್ಯದರ್ಶಿ ಗುರು ಮೆಟಗುಡ್ ಜಿಲ್ಲಾ ಉಪಾಧ್ಯಕ್ಷೆ ರತ್ನ ಗೊಧಿ ಇದ್ದರು. ಮಂಡಲ ಅಧ್ಯಕ್ಷ ಮಡಿವಾಳಪ್ಪ ಚಳಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಮಲ್ಲಿಕಾರ್ಜುನ ದೇಸಾಯಿ, ಈಶ್ವರ ಪೂಜಾರ, ಭರಮನಾಯ್ಕ ಮಲ್ಲೂರ, ಮಹಾದೇವಿ ಕಿತ್ತೂರ, ಮಂಜುನಾಥ ಕಾಡನ್ನವರ, ಮಾತನಾಡಿದರು. ಕಾರ್ಯಕ್ರಮದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ ಕಾರ್ಗಿ, ಶಾಂತಾ ಮಡ್ಡಿಕರ, ಜಗದೀಶ ಬೂದಿಹಾಳ, ಸುಧಿರ ವಾಲಿ, ಮಹೇಶ ಹರಕುಣಿ, ಬಸವರಾಜ ಬಂಡಿವಡ್ಡರ, ಸುರೇಶ ಮ್ಯಾಕಲ್, ಕುಮಾರ ಅಂಗಡಿ, ಸುರೇಶ ಮಾಟೋಳ್ಳಿ, ಶೋಭಾ ತುರಮರಿ, ಶಿವಾನಂದ ಪೂಜಾರ, ಗೌಡಪ್ಪ ಹೊಸಮನಿ, ಮುದಕಪ್ಪ ತೋಟಗಿ ಮಂಜು ಜೋರಾಪೂರ, ಸುಭಾಷ ತುರಮರಿ ಆದರ್ಶ ಗುಂಡಗಾಂವಿ ಶಿವಾನಂದ ಗುರ್ಲಕಟ್ಟಿ ಮುಂತಾದವರು ಇದ್ದರು. ಜಿಲ್ಲಾ ರೈತ ಮೊರ್ಚಾ ಕಾರ್ಯದರ್ಶಿ ಜಗದೀಶ ಬೂದಿಹಾಳ ಸ್ವಾಗತಿಸಿದರು, ನಾಮದೇವ ಕಾರಬಾರಿ ವಂದಿಸಿದರು. ದುಂಡೇಶ ಗರಗದ ನಿರೂಪಿಸಿದರು.

Read More Articles