ಶತಾಯುಷಿ ಯಮನಮ್ಮ ನಿಧನ

ಹೊಸೂರ: ಗ್ರಾಮದ ಗಣ್ಯ ಮನೆತನದ ಅನ್ನ ದಾಸೋಹಿ ಶತಾಯುಷಿ ಯಮನಮ್ಮ ರುದ್ರಪ್ಪ ಮುನವಳ್ಳಿ (101) ವಯೊಸಹಜತೆಯಿಂದ ಬುಧವಾರ ನಿಧನರಾದರು. ಮೃತರು ಕಳೆದ 80ವರ್ಷಗಳಿಂದ ಶ್ರೀ ಸೋಗಲ ಸೋಮೇಶ್ವರ ಜಾತ್ರೆಗೆ ತೆರಳುತ್ತಿದ್ದ ಯಾತ್ರಿಗಳಿಗೆ 5ದಿನ ನಿರಂತರ ರೊಟ್ಟಿ, ಅಂಬಲಿ, ಹುರಳಿಪಲ್ಯ ಹಾಗೂ ಜೋಳದ ಕಿಚಡಿಯ ನಿರಂತರ ಅನ್ನ ದಾಸೋಹ ಮಾಡಿದ್ದ ಪುಣ್ಯಾತ್ಮರು.

promotions

ಈ ಮೊದಲು ಜಾತ್ರೆಗೆ ತೆರಳುತಿದ್ದ ಯಾತ್ರಾರ್ಥಿಗಳಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಇರಲಿಲ್ಲ. ಕಾಲನಡಿಗೆಯಲ್ಲಿ ತೆರಳುತಿದ್ದ ಅನೇಕ ಯಾತ್ರಿಗಳಿಗೆ ತಂಗುವ ವ್ಯವಸ್ಥೆ ಹಾಗೂ ಅನ್ನ ದಾಸೋಹ ಮಾಡಿದ ಕಿರ್ತಿ ಇವರದ್ದು. ಇಂದಿನ ದಿನಮಾನಗಳಲ್ಲಿ ವಾಹನದ ವ್ಯವಸ್ಥೆ ಇದ್ದರು ಮನೆಯಲ್ಲಿಯೆ ಅಂಬಲಿ ವ್ಯವಸ್ಥೆ ಮಾಡುತಿದ್ದರು. ಸೊಗಲ ಜಾತ್ರೆ ಬಂದರೆ ಸಾಕು ಓಣಿಯ ಜನ ಯಮನಮ್ಮನ ದಾಸೋಹದ ಅಂಬಲಿಗೆ ಮುಗಿಬಿಳುತಿದ್ದರು. ಇಂತಹ ಸಾರ್ಥಕ ಬದುಕು ಸಾಗಿಸಿದ್ದ ಇವರ ನಿಧನದ ಸುದ್ದಿಗೆ ಗ್ರಾಮಸ್ಥರು ಹಾಗೂ ಹೊಸೂರ ಬೈಲಹೊಂಗಲ ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ ಅಂತಿಮ ನಮನ ಸಲ್ಲಿಸಿದರು.

promotions

ಬಸವಾದಿ ಶರಣರ ಪರಂಪರೆಯಂತೆ ಅಂತಿಮ ಸಂಸ್ಕಾರ ನೆರವೇರಿತು. ಮೃತರು ಸವದತ್ತಿ ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಸೇರಿದಂತೆ ನೂರಾರು ಮೊಮ್ಮಕ್ಕಳು ಮರಿಮಕ್ಕಳು, ಅಳಿಯಂದಿಯರು ಹಾಗೂ 7ಜನ ಹೆಣ್ಣು ಮಕ್ಕಳು ಅಪಾರ ಬಂದುಬಳಗ ಹೊಂದಿದ್ದಾರೆ

Read More Articles