ಎಮ್‌ಇಎಸ್‌ಗೆ ಟಿಕೆಟ್ ನೀಡುವ ಪ್ರಶ್ನೆ ಇಲ್ಲ

ಬೆಳಗಾವಿ: ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಎಮ್‌ಇಎಸ್‌ಗೆ ಟಿಕೆಟ್ ನೀಡುವ ಪ್ರಶ್ನೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಸ್ಪಷ್ಟಪಡಿಸಿದ್ದಾರೆ. ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ವಿರೋಧ ಪಕ್ಷದ ಬಗ್ಗೆ ಲೆಕ್ಕಾಚಾರ ನಾವು ಮಾಡಲ್ಲ, ಅಭಿವೃದ್ಧಿ ಅಜೆಂಡಾ ಮೇಲೆ ಚುನಾವಣೆ ಎದುರಿಸುತ್ತೆವೆ.

promotions

ಹೆಚ್ಚು ವಾರ್ಡ್ಗಳು ಕೈ ವಶವಾಗುವ ಸಾಧ್ಯತೆ ಇದೆ ಎಂದು ಭವಿಷ್ಯ ನೀಡಿದರು. ಐದು ವರ್ಷದಲ್ಲಿ ಕಾಂಗ್ರೆಸ್ ವಾರ್ಡ್ಗಳ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದೆ. ಪಿರೋಜ್ ಸೇಠ ಅವರು ಶಾಸಕರಾಗಿದ್ದಾಗ, ವಾರ್ಡ್ಗಳ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಈ ಆಧಾರದ ಮೇಲೆ ಚುನಾವಣೆ ಎದುರಿಸಿ ಗೆಲ್ಲುವು ಸಾಧಿಸುತ್ತೆವೆ. ವಾರ್ಡ್ ಸ್ಥಳೀಯ ಮುಖಂಡರ ಜತೆ ಚರ್ಚೆ ಮಾಡಲಾಗಿದೆ.

promotions

ಈಗಾಗಲೇ ಚುನಾವಣೆಗೆ ಸಜ್ಜಾಗಿದ್ದೆವೆ. ಸಮಾಜ ಸೇವೆ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ನಿರತರಾಗಿರುವ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಲಾವುದು ಎಂದರು. ರಾಜ್ಯಸಭಾ ಸದಸ್ಯರಾದ ನಾಸೀರ್ ಹುಸೇನ್ ಮಾತನಾಡಿ, ವಾರ್ಡ್ಗಳಲ್ಲಿ ಕಾಂಗ್ರೆಸ್ ಬೆಂಬಲಿತ ವ್ಯಕ್ತಿಯ ಪ್ರಭಾವ ನೋಡಿಕೊಂಡು, ನಮ್ಮ ಪಕ್ಷದ ಚಿಹ್ನೆ ಮೂಲಕ ಚುನಾವಣೆ ಎದುರಿಸುವಂತೆ ಟಿಕೆಟ್ ನೀಡಲಾಗುವುದು. ಈಗಾಗಲೇ ಹುಬ್ಬಳ್ಳಿ-ಧಾರವಾಡ, ಬಳ್ಳಾರಿ, ಬೆಳಗಾವಿ ಹಾಗೂ ಪಾಲಿಕೆ ಚುನಾವಣೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಚುನಾವಣೆ ಪೈಟ್ ಮಾಡಲಾಗುತ್ತಿದೆ.

ಎಸ್‌ಸಿ/ ಎಸ್‌ಸ್ಟಿ ಮೀಸಲಾತಿ ವಾರ್ಡ್ಗಳ ಟಿಕೆಟ್ ನಾಳೆ ಪೈನಲ್ ಮಾಡಲಾಗುತ್ತಿದೆ. ಕಾಂಗ್ರೆಸ್ ಸ್ಪರ್ಧಿಗಳಿಗೆ ಮದ್ಯಾಹ್ನ ಬಿ-ಪಾರ್ಮ ನೀಡಲಾಗುವುದು. ಪೈಟ್ ಮಾಡುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಲ್ಲಿ ಯಾವುದೇ ಗೊಂದಲ್ಲ ಇಲ್ಲ. ಹುಬ್ಬಳ್ಳಿ-ಧಾರವಾಡ ಪೈನಲ್ ಆಗಿದೆ. ಬೆಳಗಾವಿ ನಾಳೆ ಖಚಿತ ಎಂದರು. ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ, ಶಾಸಕರಾದ ಲಕ್ಷಿö್ಮÃ ಹೆಬ್ಬಾಳಕರ್ , ಅಂಜಲಿ ನಿಂಬಾಳಕರ್ , ಮಾಹಂತೇಶ ಕೌಜಲಗಿ , ಪಿರೋಜ್ ಸೇಠ, ರಾಜು ಸೇಠ, ಮಾಜಿ ಸಚಿವರು ವೀರಕುಮಾರ್ ಪಾಟೀಲ್ , ವಿನಯ, ಪ್ರದೀಪ್ ಎಂ ಜೆ, ಸುನೀಲ ಹನ್ನಮ್ಮನವರ ಹಾಗೂ ಇತರರು ಇದ್ದರು.

Read More Articles