ಬಿಜೆಪಿ ಶವಸಂಸ್ಕಾರದ ಪ್ರಣಾಳಿಕೆಗೆ ಡಿಕೆ ಸಿಡಿಮಿಡಿ

ಬೆಳಗಾವಿ: ಶವಸಂಸ್ಕಾರ ಮಾಡಲು ಉಚಿತವಾಗಿ ಕೊಡಲಾಗುವುದು ಬಿಜೆಪಿ ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿದ್ದು ನಾಚಿಗೆಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆಕ್ರೋಶ ವ್ಯಕ್ತಪಡಿಸಿದರು. ರವಿವಾರ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಅದೇಷ್ಟೋ ಜನ ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ಆಕ್ಸಿಜನ್, ಬೆಡ್ ಕೊಟ್ಟು ಬದುಕಿಸಲಿಲ್ಲ ಅದನ್ನು ಬಿಟ್ಟು ಪಾಲಿಕೆಯ ಚುನಾವಣೆಯ ಬಿಜೆಪಿ ಪ್ರಣಾಳಿಕೆಯಲ್ಲಿ ಶವ ಸಂಸ್ಕಾರ ಮಾಡಲು ಉಚಿತವಾಗಿ ವ್ಯವಸ್ಥೆ ಎಂದು ಬಿಡುಗಡೆ ಮಾಡಿದ್ದು ಖಂಡನೀಯ ಎಂದರು.

promotions

ಪಾಲಿಕೆಯಲ್ಲಿ ಕಾಂಗ್ರೆಸ್ ಗೆ ಮತ ಹಾಕಿ ಬೆಳಗಾವಿ ನಗರದ ಜನರಿಗಾಗಿ 50 ಪ್ರತಿಶತ ತೆರಿಗೆ ವಿನಾಯಿತಿ ನೀಡಲಾಗುವುದು. ಇದು ಪ್ರಣಾಳಿಕೆಯಲ್ಲ. ಡಿ.ಕೆ.ಮಾತು ಎಂದರು.

promotions

ಪಾಲಿಕೆಯಲ್ಲಿ ಎರಡು ಬಾರಿ ಆಡಳಿತ ನಡೆಸಿದ್ದಾರೆ. ಅಲ್ಲಿಯೂ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು. ಅಲ್ಲಿದ್ದ ಪ್ರಣಾಳಿಕೆಯಲ್ಲಿ ಮೊದಲು ಒಂದು ಈಡೇರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Read More Articles