ಒಂದು ಸಮುದಾಯ ಭವನ ಉದ್ಘಾಟನೆ, ಮತ್ತೊಂದಕ್ಕೆ ಭೂಮಿ ಪೂಜೆ: ಅನುದಾನ ನೀಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ಬೆಳಗಾವಿ:ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಾಳೇಕುಂದ್ರಿ ಕೆ ಎಚ್ ಗ್ರಾಮದಲ್ಲಿ ಸಮುದಾಯ ಭವನವೊಂದನ್ನು ಉದ್ಘಾಟಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಶಾಸಕರ ನಿಧಿಯಿಂದ ನಿರ್ಮಾಣವಾಗಲಿರುವ ಇನ್ನೊಂದು ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಶ್ರೀ ಕಲ್ಮೇಶ್ವರ ಮಂದಿರದ ಸಮುದಾಯ ಭವನದ ಕಟ್ಟಡವನ್ನು ಉದ್ಘಾಟಿಸಿದ ಅವರು, ಗ್ರಾಮದ ಶ್ರೀ ಮಾರುತಿ ಮಂದಿರದ ನೂತನ ಸಮುದಾಯ ಭವನದ ಕಟ್ಟಡದ ನಿರ್ಮಾಣದ ಸಲುವಾಗಿ ಶಾಸಕರ ನಿಧಿಯ ವತಿಯಿಂದ 5 ಲಕ್ಷ ರೂ. ನೀಡಿದ್ದು, ಭೂಮಿ ಪೂಜೆಯನ್ನು ನೆರವೇರಿಸಿದರು.

promotions

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ಸ್ಥಳೀಯ ಮಠಾಧೀಶರು, ಚನ್ನರಾಜ ಹಟ್ಟಿಹೊಳಿ, ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ, ನಿಲೇಶ್ ಚಂದಗಡ್ಕರ್, ಪ್ರವೀಣ, ಪಕ್ಷದ ಕಾರ್ಯಕರ್ತರು, ದೇವಸ್ಥಾನಗಳ ಕಮೀಟಿಯವರು ಉಪಸ್ಥಿತರಿದ್ದರು

promotions

Read More Articles