ಜಕನೂರ ಜನ್ಮ ದಿನದ ಪ್ರಯುಕ್ತ ಹಣು ಹಂಪಲು ವಿತರಣೆ
- 14 Jan 2024 , 10:58 PM
- Belagavi
- 121
ಬೈಲಹೊಂಗಲ: ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ತಜ್ಞವೈದ್ಯರಾಗಿ ನಾಡಿನ ರೋಗಿಗಳಿಗೆ ವೈದ್ಯಕೀಯ ಸೇವೆ ನೀಡುತ್ತಿರುವ ಡಾ.ರವೀಂದ್ರ ಜಕನೂರವರ 40ನೇ ಜನ್ಮದಿನದ ನಿಮಿತ್ಯ ಅವರ ಅಭಿಮಾನಿಗಳು ರೋಗಿಗಳಿಗೆ ಹಣ್ಣು ಹಂಪಲ ವಿತರಿಸಿ ವೈದ್ಯರನ್ನು ಸತ್ಕರಿಸಿ ವೈದ್ಯರ ಜನ್ಮದಿನವನ್ನು ಮಂಗಳವಾರ ಖಾಸಗಿ ಆಸ್ಪತ್ರೆಯಲ್ಲಿ ಆಚರಿಸಿದರು.

ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹಾಗೂ ಉಪನ್ಯಾಸಕ ಎಸ್.ಕೆ.ಮೆಳ್ಳಿಕೇರಿ ಡಾ.ರವೀಂದ್ರ ಜಕನೂರ ಅವರನ್ನು ಜನ್ಮದಿನದ ನಿಮಿತ್ಯ ಸತ್ಕರಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಿಂದ ಬರುವ ನೂರಾರು ರೋಗಿಗಳಿಗೆ ಪಟ್ಟಣದ ಸರ್ಕಾರಿ ಸಾರ್ವಜನಿಕ ತಾಲೂಕಾ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡುತ್ತಾ ಜನಮಾನಸದಲ್ಲಿ ಅಚ್ಚುಳಿಯುವಂತೆ ವೈದ್ಯಕೀಯ ಸೇವೆ ನೀಡುತ್ತಿರುವ ಡಾ.ರವೀಂದ್ರ ಜಕನೂರ ನೂರಾರುಕಾಲ ಉತ್ತಮ ಆರೋಗ್ಯದಿಂದ ಜನರಿಗೆ ವೈದ್ಯಕೀಯ ಸೇವೆ ನೀಡಲೆಂದು ಹಾರೈಸಿದರು. ಡಾ.ರವೀಂದ್ರ ಜಕನೂರ ಸತ್ಕಾರ ಸ್ವೀಕರಿಸಿ ಮಾತನಾಡಿ, ನಾನು ರೈತ ಕುಟುಂಬದಿಂದ ಬಂದಿದ್ದು ಸರ್ಕಾರದ ಕೊಟಾ ಅಡಿಯಲ್ಲಿ ನನ್ನ ವೈಧ್ಯಕೀಯ ಹಾಗೂ ಸ್ನಾತಕೋತ್ತರ ವೈದ್ಯಕೀಯ ಪದವಿಗಳನ್ನು ಪೊರೈಸಿ ನನಗೆ ಸರ್ಕಾರದ ವೈದ್ಯನಾಗಿ ಸೇವೆ ಸಲ್ಲಿಸಲು ಬೈಲಹೊಂಗಲ ನಾಡಿನಲ್ಲಿ ಅವಕಾಶ ಸಿಕ್ಕಿರುವದು ನನ್ನ ಭಾಗ್ಯ.

ಈ ನಾಡಿನ ಜನತೆ ನನಗೆ ಸಹಕಾರ ನೀಡುತಿದ್ದು ನನ್ನ ಜನ್ಮದಿನದ ನಿಮಿತ್ಯ ರೋಗಿಗಳಿಗೆ ಹಣ್ಣು ಹಂಪಲ ನೀಡುವ ಮೂಲಕ ಜನ್ಮದಿನ ಆಚರಿಸಿದ್ದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ನನ್ನ ಹತ್ತಿರ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಸ್ಪಂದಿಸಿ ನನ್ನ ಶಕ್ತಿ ಮೀರಿ ಪ್ರಾಮಾಣಿಕ ಸೇವೆ ನೀಡುತಿದ್ದೆನೆ ಇದನ್ನು ಇನ್ನು ಮುಂದೆಯು ಸಹಿತ ನಡೆಸಿಕೊಂಡು ಹೊಗುವದಾಗಿ ಹೇಳಿದರು. ಸಂದರ್ಭದಲ್ಲಿ ನಂದಿ ಡ್ರೇಸಿಸ್ಸ್ ಮಾಲಿಕ ಮಲ್ಲಿಕಾರ್ಜುನ ವಕ್ಕುಂದ, ಹೊಸೂರ ಗ್ರಾಪಂ ಸದಸ್ಯರಾದ ಮುನೀರ ಶೇಖ, ಮೋಹನ ವಕ್ಕುಂದ ಕು.ಭವ್ಯಶ್ರೀ ಎಫ್.ಎಸ್. ಮುಂತಾದವರು ಇದ್ದರು.










