ನಗರ ಸೇವಕ ಅಭ್ಯರ್ಥಿಯಾಗಲು ಕನಿಷ್ಠ ವಿದ್ಯಾರ್ಹತೆ ಇರಲಿ ! - ಮಹಾಂತೇಶ ಗದ್ದಿಹಳ್ಳಿಶೆಟ್ಟಿ
- 15 Jan 2024 , 5:26 AM
- Belagavi
- 433
ಬೆಳಗಾವಿ : ಕಳೆದ ಎರಡು, ಮೂರು ದಶಕಗಳಿಂದ ಬಹುತೇಕ, ಹಳ್ಳಿ, ಪಟ್ಟಣ, ನಗರ ಪ್ರದೇಶಗಳು ಸುಶೀಕ್ಷಿತರನ್ನು ಹೊಂದಿದವುಗಳಾಗಿವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದ, ಮಹಾನಗರ ಪಾಲಿಕೆ.

ವಿಧಾನಸಭೆ, ಲೋಕಸಭೆ ಮತ್ತು ರಾಜ್ಯಸಭೆಗಳ ಚುನಾವಣಾ ಸ್ಪರ್ಧೆಗೆ ಅಭ್ಯರ್ಥಿಯಾಗುವವರು ಕನಿಷ್ಠ ಇಂತಿಷ್ಟು ಶಿಕ್ಷಣ ಹೊಂದಿರಬೇಕೆನ್ನುವ ಕಡ್ಡಾಯ ಶಿಕ್ಷಣ ನಿಯಮವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೊಳಿಸಬೇಕಾದ ಅನಿವಾರ್ಯತೆ ಇಂದಿನ ಭಾರತದ್ದಾಗಿದೆ. ಇದರಿಂದ ಕಲಿತ ಶಿಕ್ಷಣಕ್ಕೂ ಗೌರವ ಕೊಟ್ಟಂತಾಗುತ್ತದೆ.

ಸಧ್ಯ ಪ್ರತಿ ವಾರ್ಡಗಳಿಗೆ, ಕ್ಷೇತ್ರಗಳಿಗೆ ಜಾತಿವಾರು ಮೀಸಲಾತಿ ನಿಗದಿ ಪಡಿಸಲಾಗುತ್ತಿದೆ. ಜಾತಿಯಾಧರಿಸಿ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳಿಗೆ ಆಯ್ಕೆ ನಡೆಸುತ್ತಿರುವ ಸರಕಾರ ಮತ್ತು ಚುನಾವಣಾ ಆಯೋಗ ಎಲ್ಲದಕ್ಕೂ ನಿಗದಿತ ಶಿಕ್ಷಣ ಕಡ್ಡಾಯಗೊಳಿಸುವುದು ರಾಷ್ಟ್ರ ಪ್ರಜ್ಞೆಯಾಗಿದೆ.
ಖಾಸಗಿ ಮತ್ತು ಸರಕಾರಿ ವಿವಿಧ ಇಲಾಖಾ ನೌಕರಿಗೆ ಕನಿಷ್ಠ - ಗರಿಷ್ಠ ಎನ್ನುವ ಶಿಕ್ಷಣವನ್ನು ನಿಗದಿಪಡಿಸುವಂತೆ, ಗ್ರಾಪಂ, ಪುರಸಭೆ, ಪಟ್ಟಣ ಪಂಚಾಯತಿ, ಮಹಾನಗರ ಸಭೆ ಹಾಗೂ ಶಾಸಕ, ಸಂಸದರಾಗಲು ಸ್ಪರ್ಧಿಸುವ ಅಭ್ಯರ್ಥಿಗಳಿಗೆ ನಿಗದಿತ ಶಿಕ್ಷಣ ಕಡ್ಡಾಯ ಮಾಡುವುದು ಪ್ರಜಾ ಪ್ರಭುತ್ವ ವ್ಯವಸ್ಶೆಯ ಬುನಾದಿಯಾಗಿದೆ. ಇದಕ್ಕೂ ಮೆರಿಟ ಅನ್ವಯಿಸಿದರೆ ಇನ್ನೂ ಉತ್ತಮ. ಸಧ್ಯ ಹೆಬ್ಬೆಟ್ಟಿನವರೂ ಮಂತ್ರಿಗಳಾಗುವ, ಪ್ರತಿಷ್ಠಿತ ಸಂಸ್ಥೆಗಳ, ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಾಗಿರುವುದು ನಮ್ಮ ವ್ಯವಸ್ಥೆಗಳ ದುರಂತವೇ ಸರಿ ! ನಮ್ಮ ಸಂವಿಧಾನದ ಬದ್ಧತೆಯನ್ನು ಇನ್ನಷ್ಟು ಭದ್ರಗೊಳಿಸಬೇಕು, ಉತ್ತಮ ಆಡಳಿತ ವ್ಯವಸ್ಥೆ ರೂಪಿಸಬೇಕು, ಭ್ರಷ್ಟಾಚಾರ ಕೊನೆಗೊಳ್ಳಬೇಕು ಎನ್ನುವುದಾದರೆ ಪದವಿ, ಸ್ನಾತಕೋತ್ತರ ಪದವಿ ಎನ್ನುವ ಕಡ್ಡಾಯ ನಿಯಮಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಳವಡಸಿದ್ದೇ ಆದಲ್ಲಿ ನಾವು ಅಭಿವೃದ್ಧಿಯ ಜೊತೆಗೆ ಅಧುನಿಕ ಭಾರತ ಕಂಡುಕೊಳ್ಳುವುದರಲ್ಲಿ ಎರಡು ಮಾತಿಲ್ಲ...!










