ಅಂಬಡಗಟ್ಟಿಯಲ್ಲಿಯೂ ಮಾಸ್ಟರ್ ಮೈಂಡ್ ಕಮಾಲ್

ಬೆಳಗಾವಿ :ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿ ಇರುವ ಸತೀಶ ಅಣ್ಣಾ ಜಾರಕಿ ಹೊಳಿ ಕಲ್ಯಾಣ ಮಂಟಪ ದಲ್ಲಿ ನೇಗಿಲ ಯೋಗಿ ರೈತ ಸಂಘದ ರಾಜ್ಯ ಮಟ್ಟದ ನೂತನ ಕಮಿಟಿ ಯನ್ನು ಸಂಘದ ಸಮಸ್ತ ರೈತರ ಸಮ್ಮುಖದಲ್ಲಿ ಘೋಷಣೆ ಮಾಡಲಾಯಿತು. ನೇಗಿಲಯೋಗಿ ರೈತ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ರುದ್ರಗೌಡ ಬ ಪಾಟೀಲ ನೂತನ ಕಮಿಟಿ ರಚನೆ ಮಾಡಿ ಆದೇಶ ಹೊರಡಿಸಿದರು.ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಗಳನ್ನಾಗಿ ಬೀರಪ್ಪ ದೇ ದೇಶನೂರ, ರಾಜ್ಯ ಕಾನೂನು ಸಲಹೆ ಗಾರರಾಗಿ ಹೈ ಕೋರ್ಟ್ ನ್ಯಾಯವಾದಿಗಳಾದ ಭೀಮಪ್ಪ ಎಂ ತಳ್ಳಿಗೆರಿ.

promotions

ಬೆಳಗಾವಿ ಜಿಲ್ಲಾಧ್ಯಕ್ಷರ ನ್ನಾಗಿ ಬಸವರಾಜ ರುದ್ರಪ್ಪ ಮೊಕಾಶಿ, ಜಿಲ್ಲಾ ಕಾರ್ಯಾಧ್ಯಕ್ಷ ರನ್ನಾಗಿ ಮಲ್ಲಪ್ಪ ಆರ್ ಪೂಜೇರಿ ಅವರನ್ನು ಆಯ್ಕೆ ಮಾಡಿ ಆದೇಶ ಪತ್ರ ವನ್ನು ರಾಜ್ಯಾಧ್ಯಕ್ಷ‌ ರುದ್ರ ಗೌಡ ಪಾಟೀಲ ನೀಡಿದರು. ನೇಗಿಲ ಯೋಗಿ ರೈತ ಸಂಘದ ಎಲ್ಲ ರೈತ ನಾಯಕರು ಮುಖಂಡರು, ಹಿರಿಯರು ಹಾಗೂ ಎಲ್ಲ ರೈತರು ಈ ಸಂಧರ್ಭದಲ್ಲಿ ಹಾಜರಿದ್ದರು.

promotions

Read More Articles