ಬೆಳಗಾವಿಯಲ್ಲಿ 46 ದೇವಸ್ಥಾನ ತೆರವುಗೊಳಿಸಬೇಕಿದೆ: ಜಿಲ್ಲಾಧಿಕಾರಿ ಹಿರೇಮಠ

ಬೆಳಗಾವಿ: ಜಿಲ್ಲೆಯಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವಂಥದ್ದು 46 ಇದ್ದು, ಇದು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವಂಥದ್ದು, ಈ ಪೈಕಿ 17 ತೆರೆವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.

promotions

promotions
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು‌. 39 ದೇವಸ್ಥಾನಗಳನ್ನು ತೆರವು ಮಾಡಬೇಕಿದೆ. ಅಲ್ಲದೆ ನಿಪ್ಪಾಣಿಯಲ್ಲಿ ತಾಲೂಕಿನಲ್ಲಿ ನಾಲ್ಕು ಧಾರ್ಮಿಕ ಕೇಂದ್ರಗಳನ್ನು ಸ್ಥಳಾಂತರ ಮಾಡಲು ಯೋಜನೆ ರೂಪಿಸಲಾಗಿದೆ. ಆದರೆ ಯಾವುದೇ ರೀತಿ ತೊಂದರೆಯಾಗದಂತೆ ತೆರವುಗೊಳಿಸಲಾಗುವುದು ಎಂದರು.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಹಾಗೂ ಗಣೇಶೋತ್ಸವ ಇರುವುದರಿಂದ ಕೆಲ ದೇವಸ್ಥಾನಗಳನ್ನು ತೆರವುಗೊಳಿಲ್ಲ. ಗಣೇಶೋತ್ಸವ ಮುಗಿದ ಬಳಿಕ ದೇವಸ್ಥಾನದ ಮಂಡಳಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉಳಿದ 39 ದೇವಸ್ಥಾನವನ್ನು ಯಾವುದೇ ತೊಂದರೆ ಇಲ್ಲದೆ ತೆರವುಗೊಳಿಸಲಾಗುವುದು ಎಂದರು.

ನಗರ ಪ್ರದೇಶದಲ್ಲಿ ಕೆಲವರು ತಮ್ಮ ಕಟ್ಟಡ ತೆರವುಗೊಳಿಸಬಾರದು ಎಂದು ಹೇಳಿ ದೇವಸ್ಥಾನ ಕಟ್ಟಿಕೊಂಡಿದ್ದಾರೆ. ಈ ಕುರಿತು ಪಾಲಿಕೆಯ ಅಧಿಕಾರಿಗಳು ವಾರ್ಡುಗಳಲ್ಲಿ ವರದಿ ಸಿದ್ದ ಪಡಿಸಿದ್ದಾರೆ. ಅದರಂತೆ ಅಂಥ ದೇವಸ್ಥಾನಗಳನ್ನು ತೆರವುಗೊಳಿಸಲಾಗುವುದು ಎಂದು ಹೇಳಿದರು.

ಬ್ಲ್ಯಾಕ್ ಫಂಗಸ್ ಚಿಕಿತ್ಸೆ ಸಿಗುತ್ತಿಲ್ಲ ಎಂದು ಕೆಲ ರೋಗಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ‌. ಬ್ಲ್ಯಾಕ್ ಫಂಗಸ್ ರೋಗದಿಂದ ಗುಣಮುಖರಾದವರು ಔಷಧಿ ಕೇಳುತ್ತಿದ್ದಾರೆ ಇದರಿಂದ ಸಮಸ್ಯೆಯಾಗಿದೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಲಕ್ಷಣ ಸಂಪೂರ್ಣ ಕಡಿಮೆಯಾಗಿದೆ. ಕಳೆದ ಮೂರು ದಿನಗಳಿಂದ ಬೇರೆ ಬೇರೆ ಕಾರಣಗಳಿಂದ ಕೊರೊನಾ ಅಂಕಿ ಸಂಖ್ಯೆ ಅಪಡೆಟ್ ಮಾಡಲು ವಿಳಂಬವಾಗಿದ್ದರಿಂದ ಮೌನ್ನೆ 90 ಪಾಸಿಟಿವ್ ಬಂದಿದ್ದವು. ಜನರು ಆತಂಕ ಪಡುವ ಅಗತ್ಯ ಇಲ್ಲ. ಗಡಿ ಜಿಲ್ಲೆಯಾಗಿರುವುದರಿಂದ ಕೊರೊನಾ ಬಗ್ಗೆ ಜಾಗೃತಿ ಇಂದ ಇರಬೇಕು ಎಂದರು.

ಮಕ್ಕಳ ಬಗ್ಗೆ ಮುಖ್ಯಮಂತ್ರಿಗಳು ವಾತ್ಸಲ್ಯ ಎಂಬ ಯೋಜನೆಯನ್ನು ಹಾವೇರಿ ಹಾಗೂ ಉಡುಪಿಯಲ್ಲಿ ಅವರು ಈ‌ ಹಿಂದೆ ಉಸ್ತುವಾರಿ ಸಚಿವರಿದ್ದಾಗ ಜಾರಿಗೆ ತಂದಿದ್ದರು. ಅದನ್ನು ಎಲ್ಲ ಜಿಲ್ಲೆಗೆ ವಿಸ್ತರಿಸಿದ್ದಾರೆ. ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ 18 ಲಕ್ಷ ಮಕ್ಕಳಿದ್ದಾರೆ. ಅದಕ್ಕೆ 221 ತಂಡಗಳನ್ನು ರಚನೆ ಮಾಡಿ ಪ್ರತಿಯೊಂದು ಹಳ್ಳಿಗಳಿಗೆ ಹೋಗಿ ಸ್ಕ್ರೀನಿಂಗ್ ಮಾಡುತ್ತಿದೆ. ಈಗಾಲೇ 70 ಪ್ರತಿಶತ ಮಕ್ಕಳು ಸ್ಕ್ರೀನಿಂಗ್ ಮಾಡಲಾಗಿದೆ. ಒಂದು ವಾರದಲ್ಲಿ ಬಾಕಿ ಉಳಿದ ಮಕ್ಕಳಿಗೂ ಸ್ಕ್ರೀನಿಂಗ್ ಮಾಡಲಾಗಿದೆ. ಅಲ್ಲದೆ ಪೌಷ್ಟಿಕ ಆಹಾರ ನೀಡುವುದು. ಇದರಿಂದ ರೋಗ ನಿರೋಧಕ ಶಕ್ತಿ ಮಕ್ಕಳಲ್ಲಿ ಹೆಚ್ಚಾಗುತ್ತದೆ ಎಂದರು.

Read More Articles