ಪ್ರಧಾನಿ ಜನ್ಮ ದಿನದ ಪ್ರಯುಕ್ತ 17 ರಿಂದ ವಿವಿಧ ಕಾರ್ಯಕ್ರಮ: ಪಾಟೀಲ
- 15 Jan 2024 , 2:46 AM
- Belagavi
- 104
ಬೆಳಗಾವಿ: ಪ್ರಪಂಚದ ಅಗ್ರಗಣ್ಯ ನಾಯಕನಾಗಿ ಹೊರಹೊಮ್ಮುತ್ತಿರುವ ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಜಿ ಅವರ ಜನ್ಮದಿನದ ನಿಮಿತ್ಯ ರಾಷ್ಟ್ರಾದ್ಯಂತ ಸೇ 17ರಿಂದ ನಿರಂತರ 20 ದಿನಗಳವರೆಗೆ ಸೇವಾ ಮತ್ತು ಸಮರ್ಪನೆ ಕಾರ್ಯಕ್ರಮ ಹಮ್ಮಿಕೊಂಡು ದೇಶದ ಜನತೆಯ ಸೇವೆ ಮಾಡಲು ಬಿಜೆಪಿ ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ ಎಂದು ಬೆಳಗಾವಿ ಬಿಜೆಪಿ ಜಿಲ್ಲಾ ಅಧ್ಯಕ್ಷರು ಸಂಜಯ್ ಪಾಟೀಲ್ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಪದಾಧಿಕಾರಿಗಳ ವಿಶೇಷ ಸಭೆಯನ್ನುದ್ದೇಶಿಸಿ ಮಾತನಾಡಿ ಪ್ರಪಂಚದ ಬಲಾಢ್ಯ ರಾಷ್ಟ್ರಗಳು ಭಾರತವನ್ನು ಒಂದು ಸಂದರ್ಭದಲ್ಲಿ ಅಸಡ್ಯವಾಗಿ ನೋಡುತ್ತಿದ್ದಾಗ ದೇಶದ ಅಧಿಕಾರವನ್ನು ತೆಗೆದುಕೊಂಡು ಜಗತ್ತಿಗೆ ನಾಯಕನಾಗಿ ಬೆಳೆಯುತ್ತಿರುವ ಭಾರತಾಂಬೆ ಹೆಮ್ಮೆಯ ಸುಪುತ್ರ ನರೇಂದ್ರ ಮೋದಿಜಿ ಅವರೇ ಕಾರ್ಯಕ್ಷಮತೆ ಹಾಗೂ ದೀನದಲಿತರ ಬಡವರ ರೈತರ ಮತ್ತು ಅಸಹಾಯಕ ಜನರಿಗೆ ಆಧಾರ ಸ್ತಂಭವಾಗಿ ದೇಶವನ್ನು ಮುನ್ನಡೆಸಿ ಅವಿರತ ಪರಿಶ್ರಮದೊಂದಿಗೆ ಜನರ ಸೇವೆಗಾಗಿ ದಿನದ 18 ಗಂಟೆ ಕೆಲಸ ಮಾಡುವುದರೋಂದಿಗೆ ತನ್ನ ಪ್ರಧಾನಮಂತ್ರಿಯ ಸಂಬಳವನ್ನು ದೇಶದ ಜನತೆಗೆ ಉಪಯೋಗಿಸುತ್ತಿರುವ ನೆಚ್ಚಿನ ನಾಯಕನ ಜನ್ಮದಿನದ ಅಂಗವಾಗಿ ಇಪ್ಪತ್ತು ದಿನಗಳ ಕಾಲ ದೇಶಾದ್ಯಂತ ಆರೋಗ್ಯ ಶಿಬಿರ ರಕ್ತದಾನ ಸ್ವಚ್ಛ ಭಾರತ ಕೋವಿಡ್ ಲಸಿಕಾ ಶಿಬಿರ ಆಹಾರ ವಿತರಣೆ ಹಣ್ಣು ವಿತರಣೆ ಹೀಗೆ ಅನೇಕ ತರದ ಕಾರ್ಯಗಳನ್ನು ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದಾರೆ. ಅಕ್ಟೋಬರ್ 7 ರಂದು 20 ವರ್ಷ ಚುನಾಯಿತ ಪ್ರತಿನಿಧಿಯಾಗಿ ಜನಸೇವೆ ಮಾಡುತ್ತಿರುವ ನರೇಂದ್ರ ಮೋದಿಯವರ ಕಾರ್ಯಕ್ಕೆ ಅಭಿನಂದನೆಗಳು ಸಮರ್ಪನೆ ಮಾಡಲಾಗುವುದು ಎಂದರು ಬಿಜೆಪಿ ಕಾರ್ಯಕರ್ತರು ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗದೆ ಬುಡಕಟ್ಟು ಜನಾಂಗದ ದೀನದಲಿತರ ಅಸಹಾಯಕರ ಸೇವೆ ಮಾಡಲು ಸದಾ ಸನ್ನದ್ಧರಾಗಿರುತ್ತಾರೆ ಎಂದರು.

ಬೆಳಗಾವಿ ವಿಭಾಗ ಸಹ-ಪ್ರಭಾರಿ ಗಳಾದ ಬಸವರಾಜ್ ಯಕ್ಕಂಚಿ ಮಾತನಾಡಿ ಬಿಜೆಪಿ ಪ್ರತಿಯೊಬ್ಬ ಕಾರ್ಯಕರ್ತರು 20 ದಿನಗಳ ಸೇವಾ ಮತ್ತು ಸಮರ್ಪನ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ನಿಮಿತ್ಯ ಪ್ರತಿಯೊಬ್ಬ ಕಾರ್ಯಕರ್ತರು ಖಾದಿ ಬಟ್ಟೆಗಳನ್ನು ಖರೀದಿಸಿ ಪ್ರೋತ್ಸಾಹಕರಾಗಬೇಕು ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ಯ ಒಂದಿಲ್ಲ ಒಂದು ಕಾರ್ಯವನ್ನು ಮಾಡಬೇಕೆಂದು ಕರೆಕೊಟ್ಟರು.
ಸಂಘಟನಾ ಪ್ರಭಾರಿ ಜಯಪ್ರಕಾಶ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಮೋಹಿತೆ ಮಾತನಾಡಿದರು. ವೇದಿಕೆ ಮೇಲೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುಭಾಷ್ ಪಾಟೀಲ್ ಸಂದೀಪ್ ದೇಶಪಾಂಡೆ ಇದ್ದರು ಕಾರ್ಯಕ್ರಮದಲ್ಲಿ ಜಿಲ್ಲಾ ಮಾಧ್ಯಮ ಸಂಚಾಲಕ ಎಫ್ ಎಸ್ ಸಿದ್ದನಗೌಡರ ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ್ ಮಾದಮ್ಮನವರ ಉಪಾಧ್ಯಕ್ಷರಾದ ಯುವರಾಜ್ ಜಾದವ್, ರತ್ನಾ ಗೋದಿ, ಗೋವಿಂದ ಕೊಪ್ಪದ್ , ಮಂಜುಳಾ ಹಿರೇಮಠ ಶಾಮಾನಂದ್ ಪೂಜಾರಿ, ಡಾ ಗುರುಪ್ರಸಾದ್ ಕೋತಿನ ಗುರು ಮೆಟಗುಡ, ಮಡಿವಾಳಪ್ಪ ಚಳ ಕೊಪ್ಪ, ಮುಂತಾದ ಪದಾಧಿಕಾರಿಗಳು ಇದ್ದರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ್ ಪಾಟೀಲ್ ಸ್ವಾಗತಿಸಿದರು ಸಂದೀಪ್ ದೇಶಪಾಂಡೆ ವಂದಿಸಿದರು










