ಜಿಪಂ ಸದಸ್ಯನ ಮಾದರಿ ಕಾರ್ಯ

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮದಲ್ಲಿ ಹಲವಾರು ಯುವಕರು ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ ಈ ಸಂಬಂಧ ಎಲ್ಲರಿಗೂ ಸಾವಿರಾರು ರೂಪಾಯಿ ವ್ಯಯಿಸಿ ಪುಸ್ತಕಗಳನ್ನು ಖರೀದಿಸಲು ಆಗುವುದಿಲ್ಲ ಆ ಸಂಬಂಧ ಈ ಕುರಣಿ ಗ್ರಾಮದಲ್ಲಿ ಸರಸ್ವತಿ ಗ್ರಂಥಾಲಯ ಸ್ಥಾಪನೆ ಆಗಿದ್ದು ಗ್ರಾಮದ ಮತ್ತು ಸುತ್ತಲಿನ ದಾನಿಗಳ ಸಹಾಯದಿಂದ ಈ ಗ್ರಂಥಾಲಯಕ್ಕೆ ಪುಸ್ತಕ ಪೂರೈಕೆ ಸಾಧ್ಯವಾಗಿಸಿ ಬೆಳೆಸುವುದು ಈ ಊರಿನ ಯುವಕರ ಆಲೋಚನೆ ಆಗಿದೆ. ಈ ಮೂಲಕ ಸಾವಿರಾರು ಯುವಕರು ಗ್ರಂಥಾಲಯದ ಸದುಪಯೋಗ ಪಡೆದು ಸರಕಾರಿ/ಅರೆ ಸರಕಾರಿ ಉದ್ಯೋಗ ಪಡೆದು ಏಳಿಗೆ ಸಾಧಿಸಬೇಕು ಎಂಬ ಮಹತ್ವಾಕಾಂಕ್ಷೆ ಇವರದ್ದಾಗಿದೆ. ಇವರ ಪ್ರಯತ್ನವನ್ನು ಗಮನಿಸಿದ ಇಲ್ಲಿನ ಹೆಬ್ಬಾಳ ಜಿಪಂ ಸದಸ್ಯ ಮಹಾಂತೇಶ ಮಗದುಮ ಐನೂರು, ಸಾವಿರ ರೂಪಾಯಿ ಮುಖಬೆಲೆಯ ಸುಮಾರು 15ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳನ್ನು ನೀಡುವುದರ ಮೂಲಕ ಯುವಕರಿಗೆ ಪ್ರೋತ್ಸಾಹಿಸಿದ್ದಾರೆ. ಇದು ಸ್ಪರ್ಧಾತ್ಮಕ ಪರೀಕ್ಷೆ ಓದುವ ಹಲವಾರು ಯುವಕರಿಗೆ ನೆರವಾಗಲಿದೆ.

promotions

promotions

Read More Articles