ದಲಿತ ಸಂಘರ್ಷ ಸಮಿತಿ ಕಾರ್ಯಕಾರಣಿ ಸಭೆ ಉದ್ಘಾಟಿಸಿದ:ಕಾಂಗ್ರೇಸ ಯುವ ಮುಖಂಡ ಹಬೀಬ್ ಶಿಲ್ಲೇದಾರ

ಬೆಳಗಾವಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಚಂದ್ರಕಾಂತ ಕಾದ್ರೋಳಿ ಬಣದಿಂದ ರಾಜ್ಯ ಕಾರ್ಯಕಾರಣಿ ಸಭೆ ನಡೆಸಲಾಯಿತು ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಪದಾಧಿಕಾರಿಗಳಿಗೆ ಸಂಘಟನೆ ಕಿಟಗಳನ್ನ ನೀಡಲಾಯಿತು.

promotions

ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ರಾಜ್ಯ ಕಾರ್ಯಕಾರಣಿ ಸಭೆ ನಡೆಯಿತು ಈ ಸಭೆಯ ಉದ್ಘಾಟಕರಾಗಿ ಸಮಾಜ ಸೇವಕರು ಮತ್ತು ಕಿತ್ತೂರು ಮತಕ್ಷೇತ್ರದ ಕಾಂಗ್ರೆಸ್ ಯುವ ಮುಖಂಡರಾದ ಶ್ರೀ ಹಬೀಬ ಶಿಲ್ಲೇದಾರ ಅವರು ಉದ್ಘಾಟಿಸಿದರು.ಸಂಸ್ಥಾಪಕ ಮತ್ತು ರಾಜ್ಯಾಧ್ಯಕ್ಷರು ಆಗಿರುವ ಚಂದ್ರಕಾಂತ ಎಸ್ ಕಾದ್ರೋಳಿ ಅವರು ಅಧ್ಯಕ್ಷತೆ ವಹಿಸಿದ್ದರು.

promotions

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಚಂದ್ರಕಾಂತ ಕಾದ್ರೋಳಿ ಬಣದಿಂದ ಕೋರೊನಾ ಮಹಾಮಾರಿಯಿಂದ ಸಾಕಷ್ಟು ಜನರು ಮರಣ ಹೊಂದಿದರು ಊಟ ವಿಲ್ಲದೆ ಪರದಾಡುವ ಅಂತಾ ಪರಿಸ್ಥಿತಿ ನಿರ್ಮಾಣವಾದಾಗ ತಮ್ಮ ಪ್ರಾಣದ ಹಂಗು ತೊರೆದು ಸಮಾಜ ಸೇವೆ ಮಾಡಿ ಕೋರೊನಾದಿಂದ ಮರಣ ಹೊಂದಿದ ಕೋರೊನಾ ವ್ಯಕ್ತಿಗಳನ್ನ ಅಂತ್ಯಕ್ರಿಯೆ ಮಾಡುವಲ್ಲಿ ಪ್ರಮುಖ ಪಾತ್ರದಾರಿಯಾಗಿರುವ ಮತ್ತು ಸಮಾಜ ಸೇವಕರು ಮತ್ತು ಕಿತ್ತೂರು ಮತಕ್ಷೇತ್ರದ ಕಾಂಗ್ರೆಸ್ ಯುವ ಮುಖಂಡರಾದ ಶ್ರೀ ಹಬೀಬ ಶಿಲ್ಲೇದಾರ ಅವರಿಗೆ ಸನ್ಮಾನ ಮಾಡಲಾಯಿತು.

ನಂತರ ಮುಂದಿನ ದಿನಗಳಲ್ಲಿ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಸಂಘಟನೆ ಕಾರ್ಯಕರ್ತರು ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಸಲಾಯಿತು.

ಈ ಸಂದರ್ಭದಲ್ಲಿ ಸುರೇಶ ರಾಯಪ್ಪಗೋಳ,ಸಿದ್ದಪ್ಪ ಕಾಂಬಳೆ,ದಾವಲಸಾಬ ಚಪ್ಪಿ,ಮಂಜುನಾಥ ದೊಡಮನಿ,ರವೀಂದ್ರ ವಾಳವಿ,ಬಸವರಾಜ ಕಟ್ಟಿಮನಿ,ಶ್ರೀಕಾಂತ ಮಾದರ,ಮಿಲಿಂದ ಐಹೋಳೆ,ರೂಪಾ,ವೀಣಾ,ಹನಮವ್ವ ಮರೇಣ್ಣವರ ಸೇರಿದಂತೆ ಇನ್ನುಳಿದ ಸಂಘಟನೆ ಕಾರ್ಯಕರ್ತರು ಉಪಸ್ಥಿತರಿದ್ದರು.

Read More Articles