ರಾಷ್ಟ್ರೀಯ ಪಕ್ಷದ ಮೊದಲ ಮಹಾಪೌರ ಯಾರಿಗೆ ?
- 15 Jan 2024 , 12:29 AM
- Belagavi
- 107
ಬೆಳಗಾವಿ:ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಅಭೂತಪೂರ್ವ ಜಯಶಾಲಿಯಾಗಿರುವ ಬಿಜೆಪಿಗೆ ಮಹಾಪೌರ ಹಾಗೂ ಉಪಮಹಾಪೌರ ಸ್ಥಾನ ಯಾರಿಗೆ ನೀಡುವುದು ಎಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ದರ್ಬಾರ್ ನಡೆಸುತ್ತಿದ್ದ ಎಂಇಎಸ್ ಅಂಗಡಿಯನ್ನು ಬಂದ್ ಮಾಡಿಸಿರುವ ಶಾಸಕ ಅಭಯ ಪಾಟೀಲ ಹಾಗೂ ಅನಿಲ್ ಬೆನಕೆ ಎಂಇಎಸ್ ಬೆಂಬಲಿತ ಮತದಾರರನ್ನು ಬಿಜೆಪಿಗೆ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಶಾಸಕ ಅಭಯ ಪಾಟೀಲ ಶ್ರಮದಿಂದ 92 ಪ್ರತಿಶತ ಮತದಾರರು ಬಿಜೆಪಿಗೆ ಬೆಂಬಲಿಸಿದ್ದಾರೆ. ಆದ್ದರಿಂದ ಮಹಾಪೌರ ಸ್ಥಾನವನ್ನು ಮರಾಠಿಯ ಬಿಜೆಪಿ ಸದಸ್ಯರಿಗೆ ಪಾಲಾಗುವ ಸಾಧ್ಯತೆ ದಟ್ಟವಾಗಿದೆ.
ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಲಿಂಗಾಯತ ಸಮುದಾಯವನ್ನು ಕಡೆಗಣಿಸಿದೆ ಆದ್ದರಿಂದ ಮಹಾಪೌರ ಸ್ಥಾನ ಲಿಂಗಾಯತರಿಗೆ ನೀಡಬೇಕು ಎಂಬ ಕೂಗು ಎದ್ದಿರುವುದರಿಂದ ಲಿಂಗಾಯತ ಸದಸ್ಯರಿಗೆ ಮೇಯರ್ ಸ್ಥಾನ ಕೊಡಿಸಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ. ಒಟ್ಟಾರೆ ಎರಡೂವರೆ ದಶಕಗಳ ಬಳಿಕ ಪಾಲಿಕೆಯ ಮೇಲೆ ಅಧಿಕಾರ ಹಿಡಿದಿರುವ ರಾಜಕೀಯ ಪಕ್ಷದ ಸದಸ್ಯ ಯಾರೂ ಮಹಾಪೌರ ಆಗುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿ ಇದೆ.










