ನಾಡದ್ರೋಹಿ ಎಂಇಎಸ್ ಪುಂಡರಿಗೆ ಚನ್ನಮ್ಮನ ಅವತಾರ ತೋರಿಸಿದ ಲಕ್ಷ್ಮೀ : ಕನ್ನಡಿಗರ ಪ್ರಶಂಸೆಗೆ ಪಾತ್ರ

ಬೆಳಗಾವಿ:ಮಹಾನಗರ ಪಾಲಿಕೆಯಲ್ಲಿ ಸೋತು ಸುಣ್ಣವಾಗಿರುವ ನಾಡದ್ರೋಹಿ ಎಂಇಎಸ್ 10 ದಿನದ ಸಾರ್ವಜನಿಕ ಗಣೇಶನ ವಿಸರ್ಜನೆಯ ವೇಳೆ ಕಪಿಲೇಶ್ವರ ಮಂದಿರದ ಪಕ್ಕದಲ್ಲಿರುವ ಗಣೇಶ ವಿಸರ್ಜನೆಯ ಹೊಂಡದ ಸಮೀಪ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯ ವೇದಿಕೆಯ ಮೇಲೆ ಮರಾಠಿ ಭಾಷೆಯ ಸ್ವಾಗತ ಏಕೆ ಹಾಕಿಲ್ಲ ಎಂದು ತಗಾದೆ ತಗದ ವೇಳೆ ಸ್ಥಳದಲ್ಲಿಯೇ ನಾಡದ್ರೋಹಿ ಎಂಇಎಸ್ ಪುಂಡರಿಗೆ ಪಾಲಿಕೆ ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ ಖಡಕ ಎಚ್ಚರಿಕೆ ನೀಡಿದ್ದು ಕನ್ನಡಿಗರ ಪ್ರಶಂಸೆಗೆ ಪಾತ್ರವಾಗಿದ್ದಾರೆ.

promotions

ಸದಾ ನಾಡ್ರೋಹಿ ಚಟುವಟಿಕೆ ನಡೆಸುವ ಪುಂಡ ಎಂಇಎಸ್‌ಗೆ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸೋತು ಸುಣ್ಣವಾಗಿದೆ. ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಗಣೇಶ ವಿಸರ್ಜನೆಯ ವೇಳೆ ಪುಂಡಾಟಿಕೆ ಮೆರೆದಿದ್ದಲ್ಲದೆ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯ ವೇದಿಕೆಯ ಮೇಲೆ ಮರಾಠಿ ಭಾಷೆಯ ಫಲಕ ಅಳವಡಿಸಿಲ್ಲ ಏಕೆ ಎಂದು ಪಾಲಿಕೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಅಷ್ಟೆ ಅಲ್ಲದೆ, ಪಾಲಿಕೆ ಅಧಿಕಾರಿಗಳನ್ನು ನೋಡಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಂತೆ ಕೆರಳಿದ ಪಾಲಿಕೆ ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ ಪುಂಡ ಎಂಇಎಸ್ ನಾಡದ್ರೋಹಿಗಳಿಗೆ ವೇದಿಕೆಯಲ್ಲಿಯೇ ಖಡಕ ಎಚ್ಚರಿಕೆ ಕೊಟ್ಟರು.

promotions

ಗಣೇಶ ವಿಸರ್ಜನೆಗೆ ಬಂದರಾ ವಿಸರ್ಜನೆ ಮಾಡಿದರಾ ಹೋದರಾ ಅಷ್ಟೆ ಇರಬೇಕು. ಪುಂಡಾಟಿಕೆ ಮರೆದಿದ್ದಲ್ಲದೆ ಸರಕಾರಿ ಅಧಿಕಾರಿಗಳ ಮೇಲೆ ಅವಾಜ್ ಹಾಕುತ್ತಿರಾ ಜಾಗ ಕಾಲಿ ಮಾಡಿ. ಇಲ್ಲ ಪರಿಣಾಮ ನೆಟ್ಟಗಿರಲ್ಲ ಎಂದು ಪುಂಡ ಎಂಇಎಸ್‌ನ ಪುಡಾರಿ ನಾಯಕರಿಗೆ ಎಚ್ಚರಿಕೆ ಕೊಡುತ್ತಿದ್ದಂತೆ ಬಾಲು ಮುದುಡಿಸಿಕೊಂಡು ಹೋಗುವಂತೆ ಮಾಡಿರುವುದು ಕನ್ನಡರಿಗೆ ಪ್ರೀತಿಗೆ ನಿಪ್ಪಾಣಿಕರ ಪಾತ್ರರಾಗಿದ್ದಾರೆ.

Read More Articles