ಖಾನಾಪುರದ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತಿದ ಡಾ.ಸೋನಾಲಿ ಸರ್ನೋಬತ
- 15 Jan 2024 , 2:09 AM
- Belagavi
- 122
ಬೆಳಗಾವಿ: ಡಾ.ಸೋನಾಲಿ ಸರ್ನೊಬತ್ ಇಂದು ಸಿಎಂ ಬಸವರಾಜ್ ಬೊಮ್ಮಾಯಿರವರನ್ನು ಭೇಟಿ ಮಾಡಿ ಖಾನಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಿತಿಯನ್ನು ಪರಿಶೀಲಿಸುವಂತೆ ಇತರ ಪಕ್ಷದ ಕಾರ್ಯಕರ್ತರೊಂದಿಗೆ ಬೊಮ್ಮಾಯಿರವರಿಗೆ ಮನವಿ ಮಾಡಿದ್ದಾರೆ.

ಖಾನಾಪುರ ಅತಿದೊಡ್ಡ ತಾಲುಕಾಗಿರುವುದರಿಂದ ಸಾಕಷ್ಟು ಅಭಿವೃದ್ಧಿಯ ಅಗತ್ಯವಿದೆ. ಇಲ್ಲಿ ಒಟ್ಟು ಮೂವತ್ತೈದು ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಇದ್ದು ಕೇವಲ ಐದು ಪಿಎಚ್‌ಸಿಗಳು ಕಾರ್ಯನಿರ್ವಹಿಸುತ್ತಿವೆ ಆದರೆ ಪರಿಣಾಮಕಾರಿಯಾಗಿಲ್ಲ.

ವಿದ್ಯುತ್, ಗಟಾರಗಳು ಮತ್ತು ಇತರ ಪ್ರಾಥಮಿಕ ಮೂಲಭೂತ ಅಗತ್ಯಗಳು ಕೂಡ ತೀವ್ರ ಸ್ಥಿತಿಯಲ್ಲಿವೆ. ಡಾ. ಸರ್ನೊಬತ್, ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಗೋವಿಂದ್ ಕರ್ಜೋಲ್ ಮತ್ತು ಸಂಸದೆ ಶ್ರೀಮತಿ ಮಂಗಳ ಅಂಗಡಿ ಹಾಗೂ ಸಂಸದ ಅನಂತಕುಮಾರ ಹೆಗಡೆ ಸಮಸ್ಯೆಗಳನ್ನು ಅನುಸರಿಸುತ್ತಿದ್ದಾರೆ. ಅವರೆಲ್ಲರಿಗೂ ಖಾನಾಪುರದ ಅಭಿವೃದ್ಧಿಯ ಬಗ್ಗೆ ಕಾಳಜಿ ಇದೆ ಹಾಗು ವಿದ್ಯುತ್ ಮತ್ತು ರಸ್ತೆ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದಿದ್ದಾರೆ . ಹಾಗು ಬೊಮ್ಮಾಯಿಯವರು ಅಭಿವೃದ್ಧಿ ಮತ್ತು ಸರಿಯಾದ ಪರಿಹಾರದ ಬಗ್ಗೆ ಭರವಸೆ ನೀಡಿದ್ದಾರೆ.










