ಸರಕಾರಕ್ಕೆ ಗಡುವು‌ ನೀಡುವುದು ಮುಗಿದಿದೆ: ಶ್ರೀಗಳು

ಬೆಳಗಾವಿ: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವ ವಿಚಾರ ಸರ್ಕಾರ ನೀಡಿದ ಗಡುವು ಮುಗಿದಿದೆ ಎಂದು ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

promotions

ಶುಕ್ರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.ಪಂಚಮಸಾಲಿ ಸಮಾಜಕ್ಕೆ 2 ಎ ಮಿಸಲಾತಿ ಕೊಡುವ ಗಡುವು ಮುಗಿದಿದೆ. ಈಗಾ ಏನೆ ಇದ್ರು ಸರ್ಕಾರ ಕ್ಯಾಬಿನೆಟ್ ಸಭೆ ಕರೆದು. ಆಯೋಗದ ವರದಿ ಪಡೆದು ನಮ್ಮ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವುದೊಂದೇ ಬಾಕಿ ಇದೆ ಎಂದರು.

promotions

ಈ ವಿಚಾರವಾಗಿ ನಿನ್ನೆ ಬೆಂಗಳೂರು ಅಧಿವೇಶನದಲ್ಲಿ ಸಮಾಜದ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಹಲವು ನಾಯಜರು ಧ್ವನಿ ಎತ್ತಿದ್ದಾರೆ‌. 2ಎ ಮೀಸಲಾತಿ ಹೋರಾಟಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸ ಇದೆ‌ ಎಂದರು.

ಇಂದು ಆ ವಿಚಾರವಾಗಿ ಚರ್ಚೆ ಮಾಡಿ ಉತ್ತರ ನೀಡುವುದಾಗಿ ಸಿಎಂ ಹೇಳಿದರು.ಇಂದು ಬೆಳಿಗ್ಗೆ ಸಿಎಂ ಉತ್ತರ ನೀಡಿದ್ದಾರೆ, ಆದರೆ ಏನು ತೀರ್ಮಾನ ತೆಗೆದುಕೊಂಡಿದ್ದಾರೆ ಗೊತ್ತಿಲ್ಲ.

ಶಾಸಕ ಬಸವಬಗೌಡ ಪಾಟೀಲ ವಿಮಾನ ಮೂಲಕ ಬೆಳಗಾವಿ ಗೆ ಬರ್ತಾಇದ್ದಾರೆ. ಸಿಎಂ ಅವರಿಗೆ ಯಾವ ಭರವಸೆ ನೀಡಿದ್ದಾರೆ ಗೊತ್ತಿಲ್ಲ.

ಸಮಾವೇಶದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಸಮಾವೇಶದಲ್ಲಿ ಹೋರಾಟದ ಮುಂದಿನ ರೂಪರೇಷೆಗಳನ್ನು ಚರ್ಚೆ ಮಾಡಲಾಗುತ್ತದೆ. ಸರ್ಕಾರ ಸಕಾರಾತ್ಮಕ ತೀರ್ಮಾನ ತೆಗೆದುಕೊಳ್ಳುವ ಭರವಸೆ ನಮಗೆ ಇದೆ. ಸರ್ಕಾರ ಸಿಹಿ ಸುದ್ದಿ ಕೊಡಬೇಕು. ಕೊಟ್ಟರೆ ಕಲ್ಲು ಸಕ್ಕರೆ ತುಲಾಭಾರ ಮಾಡಲಾಗುತ್ತದೆ ಎಂದರು.

Read More Articles