ಸರಕಾರಕ್ಕೆ ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ: ಶಾಸಕ ಯತ್ನಾಳ
- 15 Jan 2024 , 1:19 AM
- Belagavi
- 118
ಬೆಳಗಾವಿ:ಎಲ್ಲ ಸಮುದಾಯಕ್ಕೆ ಮೀಸಲಾತಿ ಇದೆ ಅದೇ ರೀತಿ ಪಂಚಮಸಾಲಿ ಸಮುದಾಯಕ್ಕೂ ಮೀಸಲಾತಿ ಕೊಡುವಂತೆ ಸರಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ,ನಮಗೆ ಎಲ್ಲ ಸಮುದಾಯದವರೂ ಬೆಂಬಲ ಕೊಡುತ್ತಿದ್ದಾರೆ. ಯಾರು ವಿರೋಧ ಮಾಡಿಲ್ಲ. ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿಧಾನಸೌಧದ ಅಧಿವೇಶನದಲ್ಲಿಯೇ ಆರು ತಿಂಗಳೊಳಗಾಗಿ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರು. ಸೆ.15ಕ್ಕೆ ಅದು ಮುಗಿದ ಬಳಿಕ ನಮ್ಮ ಸಮುದಾಯಕ್ಕೆ ಜಾಗೃತಿ ಮೂಡಿಸಬೇಕು.

ಒಡೆದು ಹೋಗಿರುವ ಸಮುದಾಯವನ್ನು ಒಗ್ಗೂಡಿಸಲು ಗೌಡ, ಧೀಕ್ಷ, ಗೌಡ ಲಿಂಗಾಯತರನ್ನು ಸೇರಿದಂತೆ ಮಲೇಗೌಡರು, ಆದಿ ಬಣಜಿಗರು ಪಂಚಮಸಾಲಿ ಒಕ್ಕಲಿಗ ಹಾಲುಮತ ಸಮುಯದಾಯ, ಮಡಿವಾಳ ಸಮುದಾಯದವರಿಗೂ ಮೀಸಲಾತಿ ಕೊಡುವಂತೆ ಸದನದಲ್ಲಿ ಒತ್ತಾಯಿಸಲಾಗಿದೆ ಎಂದರು. ಮುಖ್ಯಮAತ್ರಿ ಬಸವರಾಜ ಬೊಮ್ಮಾಯಿ ಅವರು, ಗುರುವಾರ ಪಂಚಮಸಾಲಿ ಸಮುದಾಯದ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ನನಗೆ ಅವರ ಮನೆಗೆ ಕರೆಸಿ ಮಾತನಾಡಿದ್ದಾರೆ. ಎಲ್ಲಾ ಸಮಾಜಕ್ಕೆ ನ್ಯಾಯ ಕೊಡುವ ನಿಟ್ಟಿನಲ್ಲಿ ಎರಡು ತಿಂಗಳು ಸಮಯ ಕೊಡಿ ಎಂದಿದ್ದಾರೆ. ನ್ಯಾ.ಸುಭಾಷ ಆಡಿ ನೇತೃತ್ವದಲ್ಲಿ ಸಮಿತಿ ಇನ್ನೂ ಕ್ರೀಯಾಶೀಲವಾಗಿಲ್ಲ.
ಆ ಸಮಿತಿಯನ್ನು ಇನ್ನೂ ಇಬ್ಬರನ್ನು ನೇಮಕ ಮಾಡಬೇಕಿದೆ ಎಂದ ಅವರು, ನಾನು ಎಲ್ಲ ಸಮುದಾಯದವರಿಗೂ ವಿನಂತಿ ಮಾಡಿಕೊಳ್ಳುತ್ತೇನೆ ಶೈಕ್ಷಣಿಕ, ಸಾಮಾಜಿಕ ಮೀಸಲಾತಿಗೆ ಮನವಿ ಕೊಡಿ ಇದೊಂದು ಒಳ್ಳೆಯ ಅವಕಾಶ ಇದೆ ಎಂದು ಕರೆ ನೀಡಿದರು. ನಮ್ಮ ಹೋರಾಟದಿಂದ ರಾಜ್ಯದಲ್ಲಿರುವ ಸಣ್ಣ ಸಮಾಜ ಅವರು ತಮ್ಮ ಮನವಿ ನೀಡಿ ಹಕ್ಕನ್ನು ಮಂಡಿಸಬಹುದು ಎಂದರು.










