ಪಂಚಮಸಾಲಿ ಸಮುದಾಯ ಭವನ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಶಾಸಕ ಕುಮಠಳ್ಳಿ.

ಅಥಣಿ : ಇವತ್ತು ನನಗೆ ಬಹಳ ಸಂತೋಷದ ದಿನ ಏಕೆಂದರೆ ಅಥಣಿಯಲ್ಲಿ ಸುಮಾರು ನಾಲ್ಕು ಸಮಾಜದ ಸಮುದಾಯ ಭವನಗಳ ನಿರ್ಮಾಣ ಕಾರ್ಯ ಜರುಗುತ್ತಿರುವುದು ವಿಶೇಷ ಎಂದು ಅಥಣಿ ಶಾಸಕ‌ ಮಹೇಶ ಕುಮಠಳ್ಳಿ ಅವರು ಹೇಳಿದರು.

promotions

ಅವರು ಸ್ಥಳೀಯ ಪಂಚಮಸಾಲಿ ಸಮುದಾಯಭವನ ಭೂಮಿಪೂಜಾ ಸಮಾರಂಭದ ಅಡಿಗಲ್ಲು ಪೂಜಾ ಸಮಾರಂಭವನ್ನು ನೆರವೇರಿಸಿ ಮಾತನಾಡಿದರು.

promotions

ಮುಖಂಡ ರಮೇಶಗೌಡ ಪಾಟೀಲ ಅವರು ಮಾತನಾಡುತ್ತಾ ಅಥಣಿಯಲ್ಲಿ ಸಮುದಾಯ ಭವನ‌ ನಿರ್ಮಾಣ ಮಾಡಿ ಸಮಾಜ್ ಜನರಿಗೆ ಹಲವು ಸಭೆ ಸಮಾರಂಭ ಮಾಡಲು ಅನುಕೂಲವಾಗುತ್ತದೆ, ನಮ್ಮ ಸಮಾಜದ ಸದೃಢವಾಗಿದ್ದು ಈ ಭವನದಿಂದ ಎಲ್ಲರಿಗೂ ಅನುಕೂಲವಾಗುತ್ತದೆ ಎಂದರು. ಅಂದಾಜು ಈ ಭವನ‌ ನಿರ್ಮಾಣಕ್ಕೆ 03 ಕೋ ರೂ ಅನುದಾನ ಖರ್ಚಾಗಬಹುದು ಅದಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.

ಅನಂತರ ನಿಲೋಗಿಯ ಸಿದ್ದಲಿಂಗ ಮಹಾಸ್ವಾಮಿಗಳು ಮತ್ತು ಅಭಿನವ ಗುರುಲಿಂಗ ಜಂಗಮ ಮಹಾಸ್ವಾಮಿಗಳು ಆಶೀರ್ವಚನ‌ ನೀಡಿದರು.

ಈ ವೇಳೆ ಡಾ ಪ್ರಕಾಶ ಕುಮಠಳ್ಳಿ, ಬಿ ಎಲ್ ಪಾಟೀಲ, ಪ್ರಕಾಶ ಪಾಟೀಲ, ಹಣಮಂತ ಯಲ್ಲಟ್ಟಿ, ಅಲಗೌಡ ಪಾಟೀಲ, ಪ್ರಕಾಶ ಚಣ್ಣನ್ನವರ, ಅವಿನಾಶ ನಾಯಿಕ, ಮುರಗೆಪ್ಪಾ ನೇಸರಗಿ, ಚಿದಾನಂದ ಪಾಟೀಲ, ಪರಶುರಾಮ ನಂದೇಶ್ವರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read More Articles