ಕೋವಿಡ್ ಸಮಯದಲ್ಲಿ ಎಬಿವಿಪಿ ಕಾರ್ಯ ಶ್ಲಾಘನೀಯ: ಮಹೇಶ ಅಥಣಿ.
- 5 Jan 2024 , 4:23 PM
- Belagavi
- 123
ಅಥಣಿ:ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ರಾಷ್ಟ್ರಪ್ರೇಮ, ಮತ್ತು ಸಮಾಜಸೇವಾ ಮನೋಭಾವ ಬೆಳೆಸುವ ಸ್ವಯಂ ಸೇವಕರ ದಿಟ್ಟ ನಿಲುವು ನೋಡಿ ಸಂತಸವಾಗುತ್ತದೆ, ಕೋವಿಡ್ ಸಮಯದಲ್ಲಿ ಎಬಿವಿಪಿಯಂತ ಸ್ವಯಂ ಸೇವಕರ ಕೆಲಸ ದೊಡ್ಡದು, ರೈತ ಸೈನಿಕ ಮತ್ತು ವಿದ್ಯಾರ್ಥಿಗಳು ದೇಶದ ಶಕ್ತಿ ನಮ್ಮ ದೇಶಕ್ಕೆ ಇಂದು ಇಂತಹ ಸಂಘಟನೆಗಳ ಅಗತ್ಯವಿದೆ ಎಂದು ಅಥಣಿ ಖ್ಯಾತ ವೈದ್ಯ ಡಾ ಮಹೇಶ ಕಾಪಸೆ ಅವರು ಹೇಳಿದರು.

ಅವರು ಪಟ್ಟಣದ ಸಿ ಬಿ ರಣಮೋಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ 2021 ನೆ ವರ್ಷದ ವಿಭಾಗ ಅಭ್ಯಾಸ ವರ್ಗ ಕಾರ್ಯಕ್ರಮದಲ್ಲಿ ಅಲ್ಗೊಂಡು ಮಾತನಾಡುತ್ತಾ ಉತ್ತಮ ಯೋಚನೆ ಆಲೋಚನೆ ಮತ್ತು ಯೋಜನೆಗಳನ್ನು ವಿದ್ಯಾರ್ಥಿಗಳು ಆದರ್ಶವಾಗಿ ಇಟ್ಟುಕೊಂಡರೆ ಅವರಿಗೆ ಉತ್ತಮ ಭವಿಷ್ಯವಿದೆ. ಗುರು ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಮಾರ್ಗದಲ್ಲಿ ನಡೆಯುವಂತಾಗಬೇಕು, ಸಂಘ ಮತ್ತು ಸಂಘಟನೆಯ ಮೂಲಕ ಗಟ್ಟಿ ಧ್ವನಿ ಎತ್ತುವ ಕೆಲಸವನ್ನು ಎಬಿವಿಪಿ ಮಾಡುತ್ತ ಬಂದಿದೆ. ಅನ್ಯಾಯವನ್ನು ಪ್ರತಿಭಟಿಸುವ ಸಾಮಾಜಿಕ ಕಳಕಳಿಯನ್ನು ಬಿತ್ತುವ ಕೆಲಸ ಎಬಿವಿಪಿಯಿಂದ ನಿರಂತರವಾಗಿ ನಡೆಸಯುತ್ತಿರುವದು ಹೆಮ್ಮೆಯ ವಿಷಯವಾಗಿದೆ ಎಂದರು.

ಈ ವೇಳೆ ಮಾತನಾಡಿದ ಕರ್ನಾಟಕ ಪ್ರಾಂತ ಕಾರ್ಯದರ್ಶಿ ಪ್ರತೀಕ ಮಾಳಿ ಎರಡು ದಿನದ ಅವಧಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲ ಶಾಖೆಗಳಿಂದ ವಿದ್ಯಾರ್ಥಿ ಮಿತ್ರರು ಬಂದಿದ್ದು ಎಪ್ಪತ್ತೈದು ವರ್ಷ ಪೂರೈಸಿದ ಜಗತ್ತಿನ ಅತಿದೊಡ್ಡ ವಿದ್ಯಾರ್ಥಿ ಸಂಘಟನೆ ಆಗಿದ್ದು ಸಮಾಜಕ್ಕಾಗಿ ಸಮಸ್ಯೆಗಳನ್ನು ಎದುರಿಸುವ ಸಮಯದಲ್ಲಿ ಕೆಲಸ ಮಾಡುತ್ತಿದೆ ಇಡೀ ದೇಶ ಲಾಕ್ಡೌನ್ ಆದ ಸಮಯದಲ್ಲಿ ಜೀವದ ಹಂಗು ತೊರೆದು ಸಮಾಜದ ನೊಂದವರಿಗೆ ಸೇವಾ ಕಾರ್ಯ ಮಾಡಿದ್ದಾರೆ. ಎಬಿವಿಪಿಯ ವಿದ್ಯಾರ್ಥಿಗಳು ಮತಪಂಥಗಳನ್ನು ಮೀರಿದವರು ಎನ್ನುವದು ಗಮನಿಸುವ ಅಂಶವಾಗಿದೆ ಎಂದರು.
ಈ ಸಮಾರಂಭದಲ್ಲಿ ಎಬಿವಿಪಿ ರಾಜ್ಯ ಉಪಾಧ್ಯಕ್ಷ ಡಾ ಆನಂದ ಹೊಸೂರ, ಶಿಕ್ಷಕ ಎಮ್ ಪಿ ಮೇತ್ರಿ, ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗದ ಎಬಿವಿಪಿ ಸಂಚಾಲಕ ರೋಹಿತ್ ಹುಮನಾದಿ, ಅಪ್ಪಣ್ಣ ಹಡಪದ, ಮಹಾದೇವ ಮೈತ್ರಿ, ಅಭ್ಯಯ ಸಗರಿ, ಸಚಿನ್ ಬಳ್ಳೊಳಿ, ಕಿರಣ ರಜಪೂತ, ಆನಂದ ಬಾಗೋಡಿ ವಿನಯ ಹೊರಟ್ಟಿ, ಮುರಗೇಶ ಶ್ಯಾಮನ್ನವರ, ವೀರಭದ್ರ ದುಗ್ಗಾನಿ, ಸಚೀನ ಅವಟಿ, ವಿಶ್ವನಾಥ ಹರೋಲಿ ಸೇರಿದಂತೆ ಚಿಕ್ಕೋಡಿ ಮತ್ತು ಬೆಳಗಾವಿ ಜಿಲ್ಲೆಯ ಎಬಿವಿಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.










