ಕಳಪೆ‌ ರಸ್ತೆ: ಶಾಸಕರ ಮುಂದೆ ಕಿತ್ತಾಡಿಕೊಂಡ ರೈತ ಮುಖಂಡ‌ ಮತ್ತು ಗುತ್ತಿಗೆದಾರ

ಬೈಲಹೊಂಗಲ: ಮೂರ್ನಾಲ್ಕು ತಿಂಗಳ ಹಿಂದೆ ಕಲ್ಲೂರನಿಂದ ಹೊಳಿ ಹೊಸುರ ಗ್ರಾಮದವರೆಗೆ 5 ಕಿಮೀ ರಸ್ತೆ ಲೋಕಾರ್ಪಣೆಗೊಂಡು ರಸ್ತೆ ಕಿತ್ತು ಹೋಗಿದೆ ಇದರ ಕುರಿತು ರಸ್ತೆ ಕಳಪೆ ಮಟ್ಟದ್ದಾಗಿದೆ ಎಂದು ಕೆಲವು ದಿನಗಳ ಹಿಂದೆ ನೇಗಿಲಯೋಗಿ ರೈತ ಸಂಘಟನೆ ವತಿಯಿಂದ ಪ್ರತಿಭಟನೆ ಮಾಡಿದ್ದನ್ನ ಸುದ್ದಿವಾಹಿನಿಗಳಲ್ಲಿ ವರದಿಯಾಗಿತ್ತು ಆದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಅಧಿಕಾರಿಗಳ ಬೇಜವಾಬ್ದಾರಿ ತನದಿಂದ ಇವತ್ತು ಶಾಸಕ ಮಹಾಂತೇಶ ದೊಡಗೌಡರ ಅವರಿಗೆ ನೇಗಿಲಯೋಗಿ ರೈತ ಸಂಘಟನೆ ರಾಜ್ಯಾಧ್ಯಕ್ಷ ರವಿ ಪಾಟೀಲ ಕಳಪೆ ಕಾಮಗಾರಿ ಕುರಿತು ತಿಳಿಸಲು ಬಂದಾಗ ಗುತ್ತಿಗೆದಾರ ಮಹಾಂತೇಶ ಚಿನ್ನಪ್ಪಗೌಡರ ಇವನು ರೈತ ಮುಖಂಡ ರವಿ ಪಾಟೀಲ ಅವರ ಮೇಲೆ ಅಕ್ರೋಶ ಭರಿತನಾಗಿದ್ದಾನೆ .

promotions

ಶಾಸಕ ಮಹಾಂತೇಶ ದೊಡಗೌಡರ ಅವರು ನೂತನ ಸದಸ್ಯರ ಸನ್ಮಾನ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಶಾಸಕ ಮಹಾಂತೇಶ ದೊಡಗೌಡರ ಮುಂದೆ ವಾಗ್ವಾದ ನಡೆದಿದೆ.

promotions

ರಸ್ತೆಯನ್ನ ಪುನರ ನಿರ್ಮಾಣ ಮಾಡಲು ಸೂಚಿಸಲಾಗುವುದು ಎಂದು ಶಾಸಕ ಮಹಾಂತೇಶ ದೊಡಗೌಡರ ತಿಳಿಸಿದರು ಸಹ ಗುತ್ತಿಗೆದಾರ ಮಹಾಂತೇಶ ಚಿನ್ನಪ್ಪಗೌಡರ ಅಕ್ರೋಶ ಭರಿತನಾಗಿ ರೈತನಿಗೆ ವಾದ ಮಾಡಿದ್ದಾನೆ. ಇದರ ಬಗ್ಗೆ ಶಾಸಕರು ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.

Read More Articles