ಯುವತಿ ಕಾಣೆ

ಅಥಣಿ : ತಾಲೂಕಿನ ಖವಟಕೊಪ್ಪ ಗ್ರಾಮದ ಇಂದ್ರವ್ವಾ ಬಸಪ್ಪ ಕಾಂಬಳೆ ಅವರ ಮಗಳಾದ ವೈಶಾಲಿ ಕಾಶಿನಾಥ ಧರೆನ್ನವರ (18) ಅವಳನ್ನು ಯಾರೋ ಯಾವುದೋ ಉದ್ದೇಶಕ್ಕಾಗಿ ಅಪಹರಣ ಮಾಡಿದ್ದಾರೆಂದು ಆರೋಪಿಸಿ ಅಥಣಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

promotions

ಘಟನೆ ವಿವರ : ದಿನಾಂಕ 16/08/2021 ರಂದು ಕವಟಕೊಪ್ಪದಿಂದ ಶಂಕರಹಟ್ಟಿ ಮಾರ್ಗವಾಗಿ ಹಾರೂಗೇರಿಯ ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿದ ವೈಶಾಲಿ ಕಾಶಿನಾಥ ಧರೆನ್ನವರ ಅವಳು ಮರಳಿ ಮನೆಗೆ ಬಾರದ್ದರಿಂದ ಅವಳನ್ನು ಯಾರೋ ಯಾವುದೋ ಉದ್ದೇಶದಿಂದ ಅಪಹರಿಸಿಕೊಂಡು ಹೋಗಿದ್ದು ಇದೆ ಎಂದು ಅವರ ಮನೆಯವರು ದೂರು ದಾಖಲಿಸಿದ್ದಾರೆ.

promotions

ಯುವತಿ 5 ಪೂಟ್ 2 ಇಂಚ ಎತ್ತರವಿದ್ದು, ಮೈಯಿಂದ ಸದೃಢ ಉದ್ದ ಮುಖ ಕೆಂಪು ಬಣ್ಣ ಉದ್ದ ಮೂಗು ಇದೆ, ಕಪ್ಪು ಬಣ್ಣದ ಟಾಪ್ ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದು ಕನ್ನಡ ಮಾತನಾಡುತ್ತಾಳೆ ಎಂದು ತಿಳಿಸಿದ್ದು, ಈ ಕುರಿತು ಅಥಣಿ ಪೋಲಿಸ್ ಠಾಣೆಯಲ್ಲಿ ದಾಖಲಾದ ದೂರಿನನ್ವಯ ತನಿಖೆಃ ನಡೆಸಲಾಗುತ್ತಿದೆ.

Read More Articles