ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಬ್ರಹ್ಮಪುತ್ರ ನದಿ:54 ಲಕ್ಷಕ್ಕೂ ಹೆಚ್ಚು ಜನರಲ್ಲಿ ಆತಂಕ
- 15 Jan 2024 , 2:18 AM
- Assam
- 122
ಗುವಾಹಾಟಿ: ಈಶಾನ್ಯ ರಾಜ್ಯ ಅಸ್ಸಾಂ ನೆರೆಯಿಂದ ತತ್ತರಿಸಿಹೋಗಿದೆ ಅತಿ ದೊಡ್ಡ ಪ್ರವಾಹಕ್ಕೆ ತುತ್ತಾಗಿದೆ. ಒಂದು ಕಡೇ ಕೊರೋನಾ ರಣಕೇಕೆ ಹಾಕುತ್ತಿದ್ದರೆ ಮತ್ತೊಂದೆಡೆ ಅಸ್ಸಾಂನಲ್ಲಿ ಉಂಟಾಗಿರುವ ಭೀಕರ ಪ್ರವಾಹದಿಂದಾಗಿ ಈ ವರೆಗೂ 79 ಜನ ಪ್ರವಾಹದಲ್ಲಿ ಸಾವನ್ನಪ್ಪಿದ್ದು, ಮಾತ್ರವಲ್ಲದೇ ಪ್ರವಾಹದ ಹೊಡೆತಕ್ಕೆ 96 ಕಾಡು ಪ್ರಾಣಿಗಳೂ ಕೂಡ ಸಾವನ್ನಪ್ಪಿವೆ. ಇದೇ ವೇಳೆ, ಅನೇಕ ಜನರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಕ್ಕಿಬಿದ್ದಿದ್ದಾರೆ, ಅವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗುತ್ತಿದೆ.

ಈ ಪ್ರವಾಹದಿಂದ ಮಾನವ ಜೀವನ ಮಾತ್ರವಲ್ಲ, ಪ್ರಾಣಿ ಸಂಕುಲದ ಮೇಲೂ ಸಹ ಪ್ರಭಾವ ಬೀರಿದೆ. ನೆರೆಯಿಂದಾಗಿ 76, ಭೂ ಕುಸಿತದಿಂದ 26 ಮಂದಿ ಸಾವಿಗೀಡಾಗಿದ್ದಾರೆ. ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿ ಇದುವರೆಗೆ 96 ಪ್ರಾಣಿಗಳು ಸಾವನ್ನಪ್ಪಿವೆ ಮತ್ತು 132 ಪ್ರಾಣಿಗಳನ್ನು ರಕ್ಷಿಸಲಾಗಿದೆ. ಪ್ರವಾಹದಂತಹ ಪರಿಸ್ಥಿತಿಯಲ್ಲಿ, ಪ್ರಾಣಿಗಳಿಗೆ ದೊಡ್ಡ ಬಿಕ್ಕಟ್ಟು ಎದುರಾಗುತ್ತದೆ.

ಅಸ್ಸಾಂನ 30 ಜಿಲ್ಲೆಗಳಲ್ಲಿ ಮಳೆ ಮುಂದುವರೆದದ್ದು, ಭೀಕರ ಪ್ರವಾಹ ಉಂಟಾಗಿದೆ. ಇದರಿಂದ 53,99,017 ಜನರು ಆತಂಕದಲ್ಲಿದ್ದಾರೆ .ಬ್ರಹ್ಮಪುತ್ರ ನದಿ ಅನೇಕ ಸ್ಥಳಗಳಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅಸ್ಸಾಂನ 30 ಜಿಲ್ಲೆಗಳು ಪ್ರವಾಹದ ಹಿಡಿತದಲ್ಲಿದ್ದು, 54 ಲಕ್ಷಕ್ಕೂ ಹೆಚ್ಚು ಜನರು ಆತಂಕದಲ್ಲಿದ್ದಾರೆ. ಎನ್‌ಡಿಆರ್‌ಎಫ್ ತಂಡಗಳು ಸಹ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.










