ಸುವರ್ಣ ಸೌಧದಲ್ಲಿ ಮೊಳಗಿದ ಕನ್ನಡ ಕಲರವ
- 13 Jan 2024 , 8:45 AM
- Belagavi
- 162
ಬೆಳಗಾವಿ:ಮಾತಾಡ್ ಮಾತಾಡ್ ಕನ್ನಡ ಘೋಷವಾಕ್ಯದಡಿ ಕನ್ನಡಕ್ಕಾಗಿ ನಾವು ಅಭಿಯಾನವನ್ನು ಗುರುವಾರ ಬೆಳಗಾವಿಯ ಸುವರ್ಣಸೌಧ ಎದುರು ಸಾಮೂಹಿಕ ಗಾಯನ ಎಲ್ಲ ಕನ್ನಡ ಮಸನುಗಳನ್ನು ಮನರಂಜಿಸುವಂತೆ ಮಾಡಿತ್ತು.

ನಾಡತಾಯಿ ಭುವನೇಶ್ವರಿ, ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ ಸೇರಿ ವಿವಿಧ ಮಹನೀಯರ ವೇಷಭೂಷಣ ತೊಟ್ಟು ಆಗಮಿಸಿದ್ದ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ರಂಗು ತಂದು ಕೊಟ್ಟರು.

ಬೆಳಗಾವಿ ನಗರದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಗಾಯನ ಮಾಡಿದರು. ಸುವರ್ಣಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ 1500 ವಿದ್ಯಾರ್ಥಿಗಳಿಂದ ಸಾಮೂಹಿಕ ಗಾಯನ ಮಾಡಿದರು. ಮರಾಠಿ ಸಂಗೀತ ಶಿಕ್ಷಕ ವಿನಾಯಕ ಮೋರೆ ನೇತೃತ್ವದಲ್ಲಿ ಗಾಯನ ನಡೆಯಿತು.
2000 ವಿದ್ಯಾರ್ಥಿಗಳಿಗೆ ಗಾಯನದ ತರಬೇತಿ ನೀಡಿರುವ ಮರಾಠಿ ಶಿಕ್ಷಕ ವಿನಾಯಕ ಮೋರೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ. ಅಲ್ಲದೆ, ಕನ್ನಡಕ್ಕಾಗಿ ನಾವು ಅಭಿಯಾನದಲ್ಲಿ ಬೆಳಗಾವಿ ಡಿಸಿ ಎಂ.ಜಿ.ಹಿರೇಮಠ ನಾಲ್ಕು ಗೀತೆಗಳ ಗಾಯನ ಬಳಿಕ ಮಕ್ಕಳ ಜತೆಗೂಡಿ ಮತ್ತೊಂದು ಹಾಡು ಹಾಡಿದ ಡಿಸಿ ಎಂ.ಜಿ.ಹಿರೇಮಠ. ಮಕ್ಕಳ ಜೊತೆಗೂಡಿ 'ಕನ್ನಡವೆಂದರೆ ಕುಣಿಯುವೆನು...' ಹಾಡು ಹಾಡಿದ ಡಿಸಿ ಎಂ.ಜಿ.ಹಿರೇಮಠ ಇದಕ್ಕೂ ಮುನ್ನ ಕನ್ನಡಕ್ಕಾಗಿ ಸಂಕಲ್ಪ ಬಗ್ಗೆ ಪ್ರಮಾಣ ವಚನ ಬೋಧನೆ ಮಾಡಲಾಯಿತು










