ಕಸಾಪ ಅಭ್ಯರ್ಥಿ ತೋಟಗೇರ ಮತಯಾಚನೆ

ಅಥಣಿ : ನವೆಂಬರ್ 21 ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ವರ್ಧಿಸಿರುವ ಗಡಿತಜ್ಞ, ಸಾಹಿತಿ, ನ್ಯಾಯವಾದಿ ರವೀಂದ್ರ ತೋಟಗೇರ ಅವರು ಇಂದು ಅಥಣಿ ನಗರ ಹಾಗೂ ತಾಲೂಕಿನ ಕೆಲಕಡೆ ಮತಯಾಚನೆ ಮಾಡಿದರು.

promotions

ಈ ವೇಳೆ ಅವರು ಮಾತನಾಡಿ ಕನ್ನಡ ನಾಡು ನುಡಿಯ ವಿಚಾರವಾಗಿ ಸುಮಾರು 20 ಸಾವಿರಕ್ಕೂ ಅಧಿಕ ದಾಖಲೆಗಳನ್ನು ಸಂಗ್ರಹಿಸಿ ಕರ್ನಾಟಕ ಸರಕಾರಕ್ಕೆ ಸಲ್ಲಿಸಿದ್ದೆನೆ, ಇಲ್ಲಿಯವರೆಗೆ ಆರೇಳು ಪುಸ್ತಕ ಬರೆದಿದ್ದು ಅವುಗಳು ಹತ್ತತ್ತು ಬಾರಿ ಮರುಮುದ್ರಣಗೊಂಡಿದೆ, ಜೊತೆಗೆ ಕಳೆದ 30 ವರ್ಷಗಳಿಂದ ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಅನೇಕ ಕನ್ನಡಪರ ಕಾರ್ಯಕ್ರಮಗಳನ್ನು ರೂಪಿಸಿ ಕನ್ನಡದ ತೇರನ್ನು ಮನೆ-ಮನಗಳಿಗೆ ಎಳೆಯುವಂತಹ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದು ಇದೇ ನವೆಂಬರ್ 21 ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ವರ್ಧಿಸಿದ್ದು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ನಮ್ಮನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

promotions

ಅವರು ಮೊದಲು ಅಥಣಿಯ ಗಚ್ಚಿನಮಠಕ್ಕೆ, ಮೋಟಗಿ ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶಿರ್ವಾದ ಪಡೆದುಕೊಂಡರು, ನಂತರ ಸಾಹಿತಿಗಳಾದ ಬಾಳಾಸಾಹೇಬ ಲೋಕಾಪೂರ, ಜೆ ಪಿ ದೊಡಮನಿ, ಅರುಣ ಯಲಗುದ್ರಿ, ಸಿ ಎ ಇಟ್ನಾಳಮಠ, ಎಸ್ ಕೆ ಹೊಳೆಪ್ಪನವರ, ಆರ್ ಎಸ್ ದೊಡ್ಡನಿಂಗಪ್ಪಗೋಳ, ಎ ಎಮ್ ಖೊಬ್ರಿ ಸೇರಿದಂತೆ ಅನೇಕರಿಗೆ ಭೇಟಿಯಾಗಿ ಮತಯಾಚನೆ ಮಾಡಿದರು, ಈ ವೇಳೆ ಅವರ ಜೊತೆ ಯುವ ಮುಖಂಡ ರವಿ ಬಡಕಂಬಿ, ಶಿಕ್ಷಕ ಸಂತೋಷ ಬಡಕಂಬಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read More Articles