ಕೃಷಿ ಕಾಯ್ದೆ ವಾಪಾಸ್ : ಮುಗಿಲು ಮುಟ್ಟಿದ್ ರೈತರ ಸಂತಸ್
- 15 Jan 2024 , 2:27 AM
- Belagavi
- 110
ಬೆಳಗಾವಿ: ಕೇಂದ್ರ ಸರ್ಕಾರ ಕೃಷಿ ಮಸೂದೆ ವಾಪಸ್ ತೆಗೆದುಕೊಂಡ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ರೈತರ ಖುಷಿ ಮುಗಿಲು ಮುಟ್ಟಿದೆ. ಪ್ರಧಾನಿ ಮೋದಿಯವರಿಗೆ ಧನ್ಯವಾದ ತಿಳಿಸಿದ ರೈತರು ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಸಂಭ್ರಮಿಸಿದರು ಹಾಗು ರೈತ ಪರ ಘೋಷಣೆ ಕೂಗಿ ತಮ್ಮ ಖುಷಿ ವ್ಯಕ್ತ ಪಡಿಸಿದರು.

ರೈತ ಮುಖಂಡರಾದ ಸಿದ್ದಗೌಡ ಮೋದಗಿ, ಚೂನಪ್ಪ ಪೂಜಾರಿ ,ಜಯಶ್ರೀ ಗುರನ್ನವರ ಮುಂತಾದವರ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸುತ್ತ ಪಟಾಕಿ ಸಿಡಿಸಿ ಸಿಹಿ ತಿನಿಸಿ ಸಂಭ್ರಮಿಸಿದರು.











