ಬೀದಿಗೆ ಬಂತು ತಹಶೀಲ್ದಾರ್ ಹಾಗೂ ಶಾಸಕರ ಜಗಳ
- 14 Jan 2024 , 11:44 PM
- Belagavi
- 107
ಬೆಳಗಾವಿ: ಜಿಲ್ಲೆಯ ರಾಯಬಾಗದ ಬಿಜೆಪಿ ಶಾಸಕ ಧುರ್ಯೋದನಐಹೊಳೆ ಹಾಗೂ ತಹಸೀಲ್ದಾರಭಜಂತ್ರಿ ನಡುವಿನ ಕಿತ್ತಾಟ ಈಗ ಬಿದಿಗೆ ಬಂದು ನಿಂತಿದೆ. ಶಾಸಕರಮಾತಿನಂತೆನನ್ನನುವಸತಿನಿಲಯದಿಂದಹೊರಕ್ಕೆತಳ್ಳಿದ್ದಾರೆ ಎಂದು ತಹಸೀಲ್ದಾರಭಜಂತ್ರಿಆರೋಪಿಸಿದರೆ, ಭ್ರಷ್ಟಾಚಾರಮಾಡಿದಕ್ಕೆಸರ್ಕಾರ ಅವರನ್ನು ಇಲ್ಲಿಂದ ಕಿತ್ತು ಹಾಕಿದೆ ಎಂದು ಶಾಸಕ ಐಹೊಳೆ ತಹಸೀಲ್ದಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗೋಮಾಳ ಜಾಗೆ ವಿಚಾರದಲ್ಲಿ ತಹಸೀಲ್ದಾರ ಚಂದ್ರಕಾಂತ ಭಜಂತ್ರಿ ಮತ್ತು ಬಿಜೆಪಿ ಶಾಸಕ ದುರ್ಯೋದನ ಐಹೊಳೆ ಮಧ್ಯೆ ಜಗಳ ಶುರುವಾಗಿದೆ. ಸದ್ಯ ತಹಸೀಲ್ದಾರ ಭಜಂತ್ರಿಯನ್ನು ಐಹೊಳೆ ತಮ್ಮ ಪ್ರಭಾವ ಬಳಿಸಿ ವರ್ಗಾವಣೆ ಮಾಡಿದ್ದಾರೆ. ಇಷ್ಟೇ ಅಲ್ಲದೇ ರಾಯಬಾಗ ರಾಣಿ ಚೆನ್ನಮ್ಮ ವಸತಿ ನಿಲಯದಲ್ಲಿ ವಾಸವಾಗಿದ್ದ ತಹಸೀಲ್ದಾರನನ್ನ ರಾತ್ರೋರಾತ್ರಿ ಹೊರಕ್ಕೆ ಹಾಕಲಾಗಿದೆ. ಶಾಸಕಐಹೊಳೆ ಅವರು ತಮ್ಮ ಪ್ರಭಾವ ಬಳಸಿ ನನ್ನನ್ನು ವಸಲಿ ನಿಲಯದಿಂದ ಹೊರ ಹಾಕಿದ್ದಾರೆಂದು ತಹಸೀಲ್ದಾರ ಭಜಂತ್ರಿ ಆರೋಪ ಮಾಡಿದ್ದಾರೆ.











