ಕಲ್ಲು ತೂರಾಟ ನಡೆಸಿ ಅಂಬ್ಯುಲೆನ್ಸ್ ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
- 30 Dec 2023 , 8:13 AM
- Belagavi
- 108
ಬೆಳಗಾವಿ: ನಗರದ ಬಿಮ್ಸ್ ಆಸ್ಪತ್ರೆಯ ಎದುರು ನಿಂತಿದ್ದ 108 ಸಂಖ್ಯೆಯ ಆಂಬ್ಯುಲೆನ್ಸಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಇಂದು ಕೊರೋನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದ ಕಾರಣ. ಏಕಾಏಕಿ ಆಸ್ಪತ್ರೆಗೆ ಬಂದ ಗುಂಪು ಆಸ್ಪತ್ರೆ ಮುಂಭಾಗದಲ್ಲಿ ನಿಂತಿದ್ದ ಆ್ಯಂಬುಲೆನ್ಸ್ ಗೆ ಬೆಂಕಿ ಹಚ್ಚಿದಷ್ಟೆ ಅಲ್ಲದೆ ಬಿಮ್ಸ್ ಆಸ್ಪತ್ರೆಯ ರಸ್ತೆಯಲ್ಲಿದ್ದ ಕಾರುಗಳ ಮೇಲೆ ಕಲ್ಲು ತೂರಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ.












