ಡಾ. ಸಂಗನ ಬಸವ ಸ್ವಾಮೀಜಿ ಲಿಂಗೈಕೆ: ಹುಕ್ಕೇರಿ ಶ್ರೀಗಳ ಶೋಕ

ಬೆಳಗಾವಿ:ಕೊಟ್ಟುರು, ಬಳ್ಳಾರಿ, ಹಾಲಕೇರಿ ಮತ್ತು ಹೊಸಪೇಟೆಯ ಶ್ರೀಮಠದ ಅಧಿಪತಿಗಳು, ಶಿವಯೋಗ ಮಂದಿರದ ಅಧ್ಯಕ್ಷರು ಆಗಿದ್ದ ಜಗದ್ಗುರು ಡಾ. ಸಂಗನಬಸವ ಸ್ವಾಮೀಜಿ ಲಿಂಗೈಕೆರಾಗಿರುವುದು ನಮಗೆ ಅತೀವ ದುಃಖ ತಂದಿದೆ. ಗುರು ವೀರಕ್ತರನ್ನು ಒಂದಡೆ ಸೇರಿಸಿ ಸಮನ್ವಯದ ಕೊಂಡಿಯಾದವರು ಡಾ. ಸಂಗನಬಸವ ಮಹಾಸ್ವಾಮೀಗಳು ಎಂದು ಹುಕ್ಕೇರಿ ಹಿರೇಮಠ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

promotions

ಸೋಮವಾರ ನಗರದ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಲಿಂ. ಡಾ. ಸಂಗನ ಬಸವ ಸ್ವಾಮೀಜಿಯ ಶೃದ್ಧಾಂಜಲಿ ಸಲ್ಲಿಸಿ ಮಾತನಾಡಿದರು. ವೀರಶೈವ ಲಿಂಗಾಯತ ಸಮುದಾಯ ಹಾನಗಲ್ ಗುರು ಕುಮಾರ ಶಿವಯೋಗಿಗಳ ಒಂದು ಕನಸಿನಂತೆ ಒಂದಾಗಿ ಇರಬೇಕು. ಶ್ರೀ ಜಗದ್ಗುರು ಪಂಚಾಚಾರ್ಯರು, ಬಸವಾಧಿ ಪ್ರಮುಖರು ಹಾಕಿಕೊಟ್ಟ ಮಾರ್ಗ ವೀರಶೈವ ಲಿಂಗಾಯತ ಸಮುದಾಯಕ್ಕೆ ದಾರಿ ದೀಪ ಎಂದು ತಮ್ಮ ಇಡೀ 84 ವರ್ಷಗಳ ಜೀವಿತಾವಧಿಯಲ್ಲಿ ಎಲ್ಲರಿಗೂ ಸಾರಿರುವ ಸಮನ್ವಯಾಚಾರ್ಯರು ಪರಮಪುಜ್ಯರನ್ನು ಕಳೆದುಕೊಂಡ ನಾವು ಇಂದು ಸಮನ್ವಯದ ಕೊಂಡಿಯೇ ಕಳಚಿದಂತಾಗಿದೆ ಎಂದು ಶೋಕ ವ್ಯಕ್ತಪಡಿಸಿದರು.

promotions

ಇದೇ ಸಂದರ್ಭದಲ್ಲಿ ಶಿವಪ್ರಸಾದ ಎಸ್. ಹಿರೇಮಠ ಡಾ. ಸಂಗನಬಸವ ಮಹಾಸ್ವಾಮೀಜಿ ಕುರಿತು ಮಾತನಾಡಿದರು. ಸಾಹಿತಿಗಳಾದ ಪ್ರಕಾಶ ಗಿರಿಮಲ್ಲನವರ ಶ್ರೀಗಳ ಕುರಿತು ಇಡೀ ಜೀವಿತಾವಧಿಯ ಎಲ್ಲಾ ವಿಶೇಷತೆಗಳನ್ನು ತಿಳಿಸಿದರು. ಜಿಲ್ಲಾ ಶಿಕ್ಷಣಾಧಿಕಾರಿಗಳು ಅಕ್ಷರ ದಾಸೋಹ ಜಿಪಂನ ಲೀಲಾವತಿ ಹಿರೇಮಠ, ಡಾ. ಬಸವರಾಜ ಬಾಗೋಜಿ, ಬುಡಾ ಎಂಜಿನಿಯರ್ ಎಂ.ವಿ.ಹಿರೇಮಠ, ಬಸವರಾಜ ಹಳಂಗಲಿ, ಸುನೀತಾ ಪಟ್ಟಣಶೆಟ್ಟಿ, ಚಂದ್ರಶೇಖರ ಶಾಸ್ತ್ರೀಗಳು ಮಂಜುನಾಥ ಭಜಂತ್ರಿ, ಹುಕ್ಕೇರಿ ಹಿರೇಮಠದ ವಿದ್ಯಾರ್ಥಿ ಪರಿಷತ್‌ನ ಅಧ್ಯಕ್ಷ ನಿಶಾಂತ ಸ್ವಾಮಿ ಸೇರಿದಂತೆ ಇನ್ನಿತರರು ಶ್ರೀಗಳಿಗೆ ಶೃದ್ದಾಂಜಲಿ ಸಲ್ಲಿಸಿದರು.

Read More Articles