ಅನುಮತಿ ಇಲ್ಲದೆ ಅಧಿವೇಶನದ ವೇಳೆ ಪ್ರತಿಭಟನೆ ನಡೆಸುವಂತಿಲ್ಲ

ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿ.13 ರಿಂದ 24ರವರಗೆ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಪ್ರತಿಭಟನೆ ಹಾಗೂ ಮನವಿ ಸಲ್ಲಿಸುವ ಸಂಘಟನೆಗಳು ಮುಂಚಿತವಾಗಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಕೆ. ತ್ಯಾಗರಾಜನ್ ಆದೇಶ ಹೊರಡಿಸಿದ್ದಾರೆ.

promotions

ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಪ್ರತಿಭಟನೆ, ಮನವಿ ಸಲ್ಲಿಸುವ ಸಂಘಟನೆಗಳು ಸಂಬoಧಿಸಿದ ಅಧ್ಯಕ್ಷರು, ಮುಖ್ಯಸ್ಥರ ಪೂರ್ಣ ಹೆಸರು, ವಿಳಾಸ, ಮೊಬೈಲ್ ನಂಬರ್ ಮತ್ತು ಇ ಮೇಲ್ ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕು.

promotions

ಪ್ರತಿಭಟನೆ ನಡೆಸಲು ನಗರ ಪೊಲೀಸ್ ಆಯುಕ್ತಾಲಯಕ್ಕೆ ಮನವಿ ಸಲ್ಲಿಸುವವರಿಗೆ ಸುವರ್ಣ ವಿಧಾನಸೌಧದ ಪಕ್ಕದಲ್ಲಿರುವ ಸುವರ್ಣ ಗಾರ್ಡನ್ ನಲ್ಲಿ ನಿಗಧಿ ಪಡಿಸಿದ ಪ್ರತಿಭಟನಾ ಸ್ಥಳ ಹಾಗೂ ಕೊಂಡಸಕೊಪ್ಪದಲ್ಲಿ ನಿಗಧಿಪಡಿಸಿದ ಟೆಂಟ್‌ಗಳಲ್ಲಿ ಸ್ಥಳವಕಾಶ ನೀಡಲಾಗುವುದು. ಅಲ್ಲದೆ, ಪೊಲೀಸ್ ಆಯುಕ್ತಾಲದಿಂದ ನಿಗದಿ ಪಡಿಸಿದ ಸ್ಥಳಗಳಲ್ಲಿ ಅವಕಾಶ ನೀಡಿ ದಿನಾಂಕವನ್ನು ನಿಗಧಿಪಡಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತಾಲದಿಂದ ಅನುಮತಿ ಪತ್ರ ಇಲ್ಲದೆ ಯಾವುದೇ ರೀತಿಯ ಪ್ರತಿಭಟನೆ, ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಇದನ್ನು ಹೊರತು ಪಡಿಸಿ ಧರಣಿ, ಉಪವಾಸ ಸತ್ಯಾಗ್ರಹ, ರ‍್ಯಾಲಿ ಇತ್ಯಾದಿಗಳಿಗೆ ಅವಕಾಶ ಇರುವುದಿಲ್ಲವೆಂದು ಖಡಕ ಎಚ್ಚರಿಕೆ ನೀಡಿದ್ದಾರೆ.

ಸಹಾಯಕ ಪೊಲೀಸ್ ಆಯುಕ್ತರು, ಅಪರಾಧ ವಿಭಾಗ ಬೆಳಗಾವಿ ನಗರ, ದೂ. ಸಂ. 0831-2471577 ಮೊಬೈಲ್ ನಂಬರ್ 9480804109, ಪೊಲೀಸ್ ಇನ್ಸ್ಪೆಕ್ಟರ್, ಸಿಸಿಆರ್‌ಬಿ ವಿಭಾಗ, ಮೊಬೈಲ್ ಸಂಖ್ಯೆ 9448185837, ಪೊಲೀಸ್ ಕಂಟ್ರೋಲ್ ರೂಂ, 0831-2405233,2452131ಗೆ ಸಂರ್ಪಕಿಸಬಹುದು.

Read More Articles