ಮೂರಾಬಟ್ಟೆಯಾದ ಜುಗುಳ್ ಗ್ರಾಮಸ್ಥರ ಬದುಕು: ಕಣ್ಮುಚಿ ಕುಳಿತ ಆಡಳಿತ

ಬೆಳಗಾವಿ : ಜುಗುಳ ಗ್ರಾಮದ ಪ್ರವಾಹ ಪೀಡಿತ ನಿವಾಸಿಗಳ ಶಾನಾಬಾಯಿ ಪಾಂಡುರಂಗ ಕಾಂಬಳೆ ಹಾಗೂ ಇತರರ ಮನೆಗಳು ಸಂಪೂರ್ಣ ಬಿದ್ದಿದ್ದು ಈಗ ಅವರು ಇರಲು ಸುರು ಇಲ್ಲದೆ ಕುಟುಂಬದ ಸಹಿತ ಹಳೇ ಸಮಾಜ ಮಂದಿರದಲ್ಲಿ ವಾಸವಾಗಿದ್ದಾರೆ ಮತ್ತು ಕಾಗವಾಡ ತಹಸೀಲ್ದಾರರು ಬಿದ್ದ ಮನೆಗಳನ್ನು ಬಂದು ಪರಿಶೀಲಿಸಿ ಹೋಗಿದ್ದಾರೆ ಆದರೆ ಇನ್ನು ಸಹ ಯಾವುದೇ ಪರಿಹಾರ ಒದಗಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

promotions
jgl

ಕಳೆದ ವರ್ಷ ಒಂದೇ ವಿ.ಪಿ.ಸಿ ನಂ: ಎ ಮತ್ತು ಬಿ ಗ್ರೇಡನಲ್ಲಿ ಬಂದಂತಾ ಕೆಲವೊಂದು ಮನೆಗಳಿಗೆ ಮತ್ತೇ ಪರಿಹಾರ ಕೊಟ್ಟಿದ್ದು ಕೆಲ ಗ್ರಾಮಸ್ಥರಿಗೆ ಯಾವುದೇ ರೀತಿ ಪರಿಹಾರ ಸಿಕ್ಕಿಲ್ಲ ಅದೆ ರೀತಿ 2019 ರಲ್ಲಿ ಮತ್ತು 2021 ರಲ್ಲಿ ಬಂದಂತಹ ಪ್ರವಾಹದಲ್ಲಿಯೂ ಸಹ ಪರಿಹಾರ ಸಿಕ್ಕಿಲ್ಲ ಎಂದು ದೂರಿದ್ದಾರೆ.

promotions

ಪ್ರವಾಹ ಬಂದು ಸಂಪೂರ್ಣ ಮನೆಗಳು ಬಿದ್ದೀವೆ ಮತ್ತು ಕೆಲವೊಂದು ಕುಟುಂಬಗಳಿಗೆ ರೂ.10,000/-ರಂತೆ ಪಡಿತರ ಚೀಟಿಗಳಿಗೆ ಹಣ ಸಹಿತ ಸಿಕ್ಕಿಲ್ಲ ಅಂತ ಹೇಳಿದ್ದಾರೆ ಮತ್ತು ಕೆಲವರ ಫೈಲಗಳು ಸಹಿತ ಕಳೆದು ಹೋಗಿವೆ ಎಂದು ಹೇಳಿದ್ದಾರೆ ಮತ್ತು 30- 40 ದಿನಗಳ ಕಾಲ ಲಾಗಿನ ಚಾಲ್ತಿಯಲ್ಲಿ ಇದ್ದರು ಸಹಿತ ಕೊನೆ ಕ್ಷಣಗಳಲ್ಲಿ ಫೈಲುಗಳು ಲಾಗಿನನಲ್ಲಿ ಹಾಕದೇ ಉಳಿದು ಹೋದವು.

jgl

30/10/2021 ದಿನಾಂಕದಂದು ಮಾತ್ರ ಜೋರಾಗಿ ಓಡಾಡಿ ಯಾಕೆ ಹಾಕಿದರೂ ಅಂತಾ ಗೊತ್ತಾಗಲಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. 2019 ರಲ್ಲಿ ಪರಿಹಾರ ಸಿಗದೆ ಮತ್ತು 2021 ರಲ್ಲಿ ಸಹ ಪರಿಹಾರ ಸಿಗದೆ ಇವರ ಕುಟುಂಬದವರು ಪ್ರತಿ ದಿನ ಇದ್ದು ಸತ್ತಾಗೆ ಬದಕುತ್ತಿದ್ದಾರೆ ಮತ್ತು ಎರಡು ವರ್ಷಗಳಿಂದ ಕೊರುಗುತ್ತಿದ್ದಾರೆ ಯಾರಿಗೆ ಯಾವಾಗ ಏನಾಗುತ್ತದೆ ಅಂತಾ ಗೊತ್ತಾಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.

jgl

ದಿನಾಂಕ್ 29/10/2021 ಕ್ಕೆ ಮಾನ್ಯ ಬೆಳಗಾವಿ ಜಿಲ್ಲಾ ದಂಡಾಧಿಕಾರಿಗಳಿಗೆ ಬೇಟಿ ನೀಡಿ ಮನವಿ ಪತ್ರ ಕೊಟ್ಟು ಹೋಗಿದ್ದರು ಆದರೂ ಸಹಿತ ತಹಸೀಲ್ದಾರರು ಯಾವುದೇ ರೀತಿ ಪರಿಶಿಲನೆ ನಡೆಸಿಲ್ಲ ಎಂದು ದೂರಿದ್ದಾರೆ ಮತ್ತು ತಮಗೆ ನ್ಯಾಯ ಒದಗಿಸಿ ಕೊಡಬೇಕಾಗಿ ವಿನಂತಿಸಿದ್ದಾರೆ.

Read More Articles