ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಿಗೆ ಕೊರೋನಾ ಅರಿವು, ಜಾಗೃತಿ ಮೂಡಿಸಲು ರಾಜ್ಯಧ್ಯಕ್ಷರಿಂದ ಕರೆ

ಬೆಂಗಳೂರು:  ರಾಜ್ಯಾಧ್ಯಕ್ಷರಾದ ಮಾನ್ಯ ಶ್ರೀ, ಡಿ ಕೆ ಶಿವಕುಮಾರವರು ಕಾಂಗ್ರೆಸ್ ಪ್ರತಿ ಬ್ಲಾಕ್ ಅಧ್ಯಕ್ಷರಿಗೆ ಕರೋನಾ ರೋಗದ ಕುರಿತು ಅರಿವು ಹಾಗೂ ಜನಜಾಗ್ರತಿ ಮೂಡಿಸುವ ವ್ಯವಸ್ಥೆಯ ಬಗ್ಗೆ ಕರೆ ಕೊಟ್ಟಿದ್ದಾರೆ ಪ್ರತಿ ಗ್ರಾಮದಲ್ಲಿ ಮೂವರು ವ್ಯಕ್ತಿಗಳನ್ನು ನೇಮಕ ಮಾಡಲು ಬ್ಲಾಕ್ ಅಧ್ಯಕ್ಷರಿಗೆ ಕರೆ ಕೊಟ್ಟಿದ್ದಾರೆ. ಆಯಾ ಮತಕ್ಷೇತ್ರದಲ್ಲಿ ಬರುವ ಅಧ್ಯಕ್ಷ ನೇಮಿಸಿದ ವ್ಯಕ್ತಿಗಳು ತಮ್ಮ ವ್ಯಾಪ್ತಿಯ ಪ್ರತಿ ಮನೆಯ ಬಾಗಿಲಿಗೆ ಹೋಗಿ ಆ ಮನೆಯವರ ಆರೋಗ್ಯವನ್ನು ಪರಿಶೀಲನೆ ಮಾಡಿ ಪರೀಕ್ಷಿಸಿ ಅವರಲ್ಲೇನಾದರೂ ಏರುಪೇರುಗಳಾಗಿದ್ದರೆ ಸಮೀಪದ ಆರೋಗ್ಯ ಕೇಂದ್ರಕ್ಕೆ ತಕ್ಷಣ ಮಾಹಿತಿ ನೀಡಿ ಅವರಿಗೆ ಆತ್ಮ ಧೈರ್ಯ ತುಂಬಬೇಕು ಎಂದು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರು ಹೇಳಿದ್ದಾರೆ ಈ ಕೆಲಸ ಕೈಗೊಳ್ಳುವಾಗ ಆ ಗ್ರಾಮದ/ವಾರ್ಡಿನ ಮತದಾರರ ಯಾದಿಯನ್ನು ಕಡ್ಡಾಯವಾಗಿ ಜೊತೆಗೆ ತೆಗೆದುಕೊಂಡು ಅವರ ದೂರವಾಣಿಯನ್ನು ಅದರಲ್ಲಿ ನಮೂದಿಸಿಕೊಳ್ಳಬೇಕು ಈ ಕೆಲಸ ಪೂರ್ಣಗೊಳ್ಳುವವರೆಗೆ ಗ್ರಾಮದ ಪ್ರತಿ ವಾರ್ಡಿನ ಜನರು ಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು. ಕಾಂಗ್ರೇಸ ಪಕ್ಷವು ಜನರಿಗೋಸ್ಕರ,ಜನರಿಗಾಗಿ ಯಾವತ್ತೂ ಜೊತೆಗಿರುತ್ತದೆ.ಜೊತೆಗೆ ತಾವುಗಳೆಲ್ಲಾ ಮುಂಜಾಗ್ರತಾ ಸೂಕ್ತ ಕ್ರಮವಹಿಸಿ ಪಾಲಿಸಲು ವಿಡಿಯೋ ಕಾನ್ಫರೆನ್ಸ್ ಕರೆ ಮಾಡುವ ಮೂಲಕ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಿಗೆ ತಿಳಿಸಿದ್ದಾರೆ.

promotions

promotions

Read More Articles