ಗುಜನಾಳ ಮತಗಟ್ಟೆಯಲ್ಲಿ ನಾನೇ ಏಜೆಂಟ್ ಆಗುವೆ: ಶಾಸಕ ಸತೀಶ

ಬೆಳಗಾವಿ :ಸ್ಥಳೀಯ ಸಂಘ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಗೋಕಾಕ ಮತಕ್ಷೇತ್ರವೇ ಬೇರೆ ಇದೆ. ಕಾಂಗ್ರೆಸ್ ಗೆಲ್ಲಿಸಲು ನಾನು ಏಜೆಂಟ್ ಆಗಲು ಸಿದ್ಧನಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದರು.

promotions

ಗೋಕಾಕ ಹಾಗೂ ಅರಬಾವಿಯಲ್ಲಿ ಕಾಂಗ್ರೆಸ್ ಪಕ್ಷದ 30 ಪ್ರತಿಶತ ಮತಗಳು ಇವೆ. ಗುಜನಾಳ ಮತಗಟ್ಟೆಯಲ್ಲಿ ಪ್ರತಿ ಬಾರಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಪ್ರಭಾವ ಹೆಚ್ಚಿರುತ್ತದೆ. ನಾನು ಗುಜನಾಳ ಮತಗಟ್ಟೆಯಲ್ಲಿ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತೇನೆ. ಅಶೋಕ ಪೂಜಾರಿ ಮಮದಾಪೂರ ಮತಗಟ್ಟೆಯಲ್ಲಿ ಹಾಕಲಾಗುವುದು ಎಂದರು.

promotions

ಅಶೋಕ ಪೂಜಾರಿ ಅವರು ಆದಷ್ಟು ಬೇಗ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆ. ಯಾವುದೇ ಅನುಮಾನ ಬೇಡ ಎಂದರು.

Read More Articles