ಕಲಾಪ ವೀಕ್ಷಿಸಲು ವಿಧ್ಯಾರ್ಥಿಗಳಿಗೆ ಅವಕಾಶ ಇಲ್ಲ: ಸ್ಪೀಕರ್ ಕಾಗೇರಿ

ಬೆಳಗಾವಿ: ವಿದ್ಯಾರ್ಥಿಗಳಿಗೆ ಕಲಾಪ‌ ವೀಕ್ಷಣೆಗೆ ಅವಕಾಶ ಇಲ್ಲ. ಸಾರ್ವಜನಿಕರಿಗೆ ಅವಕಾಶ ಇದೆ ಎಂದು ವಿಧಾನಸಭಾ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಗುರುವಾರ ಸುವರ್ಣ ವಿಧಾನ ಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಚಳಿಗಾಲ ಅಧಿವೇಶನ ಮೂರು ವರ್ಷಗಳ ಬಳಿಕ ಬೆಳಗಾವಿಯಲ್ಲಿ ಆಗುತ್ತಿದೆ.

promotions

ಕಳೆದ ಎರಡೂ ವರ್ಷದಿಂದ ಕೊರೊನಾ ಸೋಂಕಿನಿಂದ ನಡೆಸಲು ಸಾಧ್ಯವಾಗಲಿಲ್ಲ. ಜಿಲ್ಲಾಡಳಿತ ಸರಕಾರಕ್ಕೆ ಅಧಿವೇಶನ ನಡೆಸುವುದು ಸವಾಲಾಗಿದೆ. ಎಲ್ಲಾ ಸಿದ್ದತೆ ನಡೆಸಿ ಅಧಿವೇಶನ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ಕುರಿತು ಸಿಎಂ ಜತೆಗೆ ಮಾತನಾಡಿದ್ದೇನೆ. ಕೋವಿಡ್ ಮಾರ್ಗಸೂಚಿಯಲ್ಲಿ ಸಿದ್ದತೆ ಮಾಡಲಾಗಿದೆ. ಅತೀ ವೃಷ್ಟಿಯಿಂದ ಜನರಿಗೆ ಸಾಕಷ್ಟು ತೊಂದರೆಯಾಗಿದೆ.

promotions

ಅಧಿಕಾರಿಗಳಿಗೆ ಸಂತ್ರಸ್ತರಿಗೆ ಪರಿಹಾರ ಕೊಡುವುದರ ಜತೆ ಜತೆಗೆ ಅಧಿವೇಶನ ನಡೆಸಿಕೊಂಡು ಹೋಗುವ ಜಬ್ದಾರಿ ಇದೆ. ಅಲ್ಲದೆ ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆ, ಪುರಸಭೆ, ಪಪಂ ಚುನಾವಣೆಯೂ ಇದೆ. ಇದರ ಮಧ್ಯ ಅಧಿವೇಶ‌ ನಡೆಸಿಕೊಂಡು‌ ಹೋಗುವ ಸವಾಲು ಇದೆ ಎಂದರು.

Read More Articles