ಕಿಲ್ಲರ್ ಕರೋನಾದ ಸಂದರ್ಭದಲ್ಲಿಯು ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇನೆ, ಶಾಸಕ ದುರ್ಯೋಧನ ಐಹೊಳೆ

ಬೆಳಗಾವಿ: ಕಿಲ್ಲರ್ ಕರೋನಾದ ಸಂದರ್ಭದಲ್ಲಿ ಸರ್ಕಾರದಿಂದ ಜಿಲ್ಲೆಯ ರಾಯಭಾಗ ತಾಲೂಕಿನ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಕ್ಷೇತ್ರದ ಜಿರ್ಣೋದ್ಧರಕ್ಕೇ ಸದಾ ನಾನು ಸಿದ್ದ ವಾಗಿದ್ದೇನೆ ಗುತ್ತಿಗೆದಾರರು ಒಳ್ಳೆಯ ಗುಣಮಟ್ಟದ ಕಾಮಗಾರಿ ಕೈಗೊಳಬೇಕು ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದ್ದಾರೆ. ರಾಯಬಾಗ ತಾಲೂಕಿನ ಮಾಂಗನೂರ, ತೋರನಹಳ್ಳಿ, ಹತ್ತರವಾಟ ಗ್ರಾಮದಲ್ಲಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಐಹೊಳೆ ಶಿಕ್ಷಣಕ್ಕೆ ಒತ್ತೂ ನೀಡುವ ನಿಟ್ಟಿನಲ್ಲಿ ಸುಮಾರು 75 ಲಕ್ಷ ನಬಾರ್ಡ್ ಯೋಜನೆ ಅಡಿಯಲ್ಲಿ, ಸುಸಜ್ಜಿತ ಕೊಠಡಿಗೆ ಚಾಲನೆ ನೀಡಿದ್ದೇವೆ ಎಂದು ಹೇಳಿ ರಾಯಭಾಗ ತಹಶಿಲ್ದಾರರ ವಿಷಯದಲ್ಲಿ ನನಗೆ ಯಾವದೇ ವೈಯಕ್ತಿಕ ದ್ವೇಷ ಇಲ್ಲ. ಅಧಿಕಾರ ಲೋಪದಿಂದ ತಹಶಿಲ್ದಾರರನ್ನು ವರ್ಗಾಯಿಸಲಾಗಿದೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದ್ದಾರೆ.

promotions

promotions

Read More Articles