ಚನ್ನರಾಜ ಹಟ್ಟಿಹೊಳಿ ಅವರಿಂದ ಡಾ.ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆಗೆ ನಮನ
- 15 Jan 2024 , 2:38 AM
- Belagavi
- 96
ಬೆಳಗಾವಿ: ಡಾ.ಬಾಬಾ ಸಾಹೇಬ ಅಂಬೇಡ್ಕರ್ ಮಹಾಪರಿನಿರ್ವಾಣ ದಿನದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಸೋಮವಾರ ಬೆಳಗಾವಿಯ ಅಂಬೇಡ್ಕರ್ ಭವನಕ್ಕೆ ತೆರಳಿ ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ, ಭಾರತ ರತ್ನ, ಮಹಾನ್ ಮಾನವತಾವಾದಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ನಮನಗಳನ್ನು ಸಲ್ಲಿಸಿದರು.

ಅಂಬೇಡ್ಕರ್ ಅವರು ದೇಶಕ್ಕೆ ಹಾಕಿಕೊಟ್ಟ ಮಾರ್ಗ, ಆಚಾರ, ವಿಚಾರಗಳನ್ನು ಸದಾಕಾಲವೂ ಗೌರವಿಸಿ, ದೇಶದ ಸಂವಿಧಾನದಡಿಯಲ್ಲಿ ಮುನ್ನೆಡೆಯೋಣ. ಅವರು ಬಾಲ್ಯದಿಂದಲೇ ರೂಢಿಸಿಕೊಂಡ ಬಂದಂತಹ ಸಾಮಾಜಿಕ ಕಳಕಳಿಯ ಮಾನವೀಯತೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಚನ್ನರಾಜ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಮಲ್ಲೇಶ ಚೌಗಲೆ, ಮಲ್ಲೇಶ ಕುರಂಗಿ, ಬಸವರಾಜ ರಾಯವ್ವಗೋಳ, ಸಿದ್ದಪ್ಪ ಕಾಂಬಳೆ, ಮಹೇಶ ಕೋಲಕಾರ, ಸಿದ್ದರಾಯಿ ಮೇತ್ರಿ, ಬಾಬು ಕೋಲಕಾರ ಮುಂತಾದವರು ಉಪಸ್ಥಿತರಿದ್ದರು.










