ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆಗೆ ವಿರೋಧ

ಬೆಳಗಾವಿ :ಅಂಗನವಾಡಿ ಮತ್ತು ಶಾಲಾ ಮಕ್ಕಳ ಬಿಸಿಯೂಟದಲ್ಲಿ ಕೋಳಿ ಮೊಟ್ಟೆ ಕೊಡಬಾರದು ಎಂದು ಆಗ್ರಹಿಸಿ ಗುರುವಾರ ಸಮಸ್ತ ಸಸ್ಯಹಾರಿ ನಾಗರೀಕರ ಒಕ್ಕೂಟ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ರವಾನಿಸಿದರು.

promotions

ಸರಕಾರದ ಯೋಜನೆಗಳು ಜನರ ಕಲ್ಯಾಣ ಬಯಸಿ ರೂಪಿತವಾದವು. ಸರಕಾರ ಪ್ರಸ್ತುತ ದಿನದಲ್ಲಿ ಶಾಲಾ ಮಕ್ಕಳಿಗೆ ಕೋಳಿ ಮೊಟ್ಟೆಯನ್ನು ಸಾರ್ವಜನಿಕವಾಗಿ ವಿತರಿಸುವ ಯೋಜನೆಯನ್ನು ಸರಕಾರ ಕೈ ಬಿಡಬೇಕು. ಇದು ಮಕ್ಕಳಲ್ಲಿ ಭೇದಭಾವಕ್ಕೆ ಆಸ್ಪದ ಕೊಟ್ಟಂತಾಗುತ್ತದೆ.

promotions

ಅಲ್ಲದೆ, ಸ್ನೇಹ ಸಂಬಂಧಗಳ ಅಡೆತಡೆಗಳನ್ನು ಎಳೆಯ ಮನಸ್ಸಿನಲ್ಲೇ ಸರಕಾರ ಬಿತ್ತಿದ್ದ ಹಾಗೆ ಆಗುತ್ತದೆ ಎಂದು ಮನವಿಯಲ್ಲಿ ಆಪಾದಿಸಿದ್ದಾರೆ. ಶಾಲೆಯಲ್ಲಿ ನೀಡುವ ಬಿಸಿಯೂಟದ ವಿತರಣೆಯಲ್ಲಿ ಸಾಲಾಗಿ ಕುಳಿತ ಮಕ್ಕಳಿಗೆ ಒಬ್ಬರಿಗೆ ಒಂದು ನೀಡಿ ಇನ್ನೊಬ್ಬರಿಗೆ ಮತ್ತೊಂದು ನೀಡಿದಾಗ ಎಳೆಯ ಮನಸ್ಸುಗಳಲ್ಲಿ ಗೊಂದಲ‌ ನಿರ್ಮಾಣವಾಗುತ್ತದೆ. ಭೋಜನದ ಸಂದರ್ಭದಲ್ಲಿ ಪಂಕ್ತಿಯಲ್ಲಿ ಕುಳಿತಾಗ ಎಲ್ಲರಿಗೂ ಒಂದೇ ತರನಾದ ಆಹಾರವನ್ನೆ ವಿತರಿಸಬೇಕೆಂದು ಮನವಿಯಲ್ಲಿ‌ ಆಗ್ರಹಿಸಿದರು.

ಮೊಟ್ಟೆಗಳನ್ನು ಎಲ್ಲರೂ ಸೇವಿಸುವುದಿಲ್ಲ. ಆದರೆ, ಸಸ್ಯಹಾರವನ್ನು ಎಲ್ಲರೂ ಸ್ವೀಕರಿಸಬಹುದಾದ ಆಹಾರ. ಮಕ್ಕಳಿಗೆ ಜೀರ್ಣವಾಗುವ ಹಣ್ಣು, ಹಾಲು ವಿತರಿಸುವುದೇ ಸೂಕ್ತ ಸರಕಾರ ಮೊಟ್ಟೆ ವಿತರಣೆ ಮಾಡುವುದನ್ನು ಕೈ ಬಿಡಬೇಕೆಂದು ಪ್ರತಿಭಟನಾಕಾರರು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಶ್ರೀ ಬಸವ ಪ್ರಕಾಶ ಸ್ವಾಮೀಜಿ, ರಾಜೇಂದ್ರ ಜೈನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read More Articles