ಸ್ಪರ್ಧಿಸಿದ ಎಲ್ಲಾ ಕ್ಷೇತ್ರದಲ್ಲಿ ಗೆಲ್ಲುತ್ತೇವೆ: ಸಿಎಂ ಬೊಮ್ಮಾಯಿ‌.

ಬೆಳಗಾವಿ :ಸ್ಪರ್ಧಿಸಿದ ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ತೇವೆ ಎಂದು ಬೆಳಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಸಾಂಬ್ರಾ ವಿಮಾನದಲ್ಲಿ ಮಾಧ್ಯಮ ‌ಸ್ನೇಹಿತರೊಂದಿಗೆ ಮಾತನಾಡಿದರು. ವಾತಾವರಣ ಬಹಳ ಚೆನ್ನಾಗಿದೆ, ಏನ್ ಗೊತ್ತಾಗಲ್ಲ. ನಮ್ಮವರು ವರದಿ ಕೊಟ್ಟಿರೋ ಪ್ರಕಾರ ಎಲ್ಲಾ ಕಡೆ ಚೆನ್ನಾಗಿದೆ.

promotions

ಬೆಳಗಾವಿಯಲ್ಲಿ ಸಿಎಂ ಸಭೆ‌ ನಡೆಸಿದ ಬಳಿಕ ವಾತಾವರಣ ಬದಲಾಗಿದೆ ಅಂತಾ ಮಾಧ್ಯಮಗಳ ಪ್ರಶ್ನೆ ಈ ಬಗ್ಗೆ ನೀವೇ ಹೇಳಬೇಕು ಎಂದ ಸಿಎಂ ಬಸವರಾಜ ಬೊಮ್ಮಾಯಿ. ಒಂದೊಂದು ಚುನಾವಣೆ ಅದರದ್ದೆ ಆದಂತ ಮತದಾರರು ಮೇಲೆ ತೀರ್ಮಾನ ಇರುತ್ತದೆ.

promotions

ಉಪಚುನಾವಣೆ ಇರಲಿ, ವಿಧಾನ ಪರಿಷತ್ ಚುನಾವಣೆ ಇರಲಿ ಅದರ ನೆಲೆಗಟ್ಟಿನ ಮೇಲಾಗುತ್ತೆ.ವಿಧಾನಸಭೆ ಚುನಾವಣೆ ಆ ನೆಲೆಗಟ್ಟಿನ ಮೇಲೆ ಆಗುತ್ತೆ. ಅವತ್ತಿನ ಸಂದರ್ಭದಲ್ಲಿ ಯಾವ ರಾಜಕೀಯ ಸನ್ನಿವೇಶ ಇರುತ್ತೋ ಆ ನೆಲೆಗಟ್ಟಿನ ಮೇಲೆ ಆಗುತ್ತೆ.

ಉತ್ತರ ಕರ್ನಾಟಕ ಹಲವು ಸಮಸ್ಯೆಗಳು ಸಹಜವಾಗಿ ಚರ್ಚೆಗೆ ಬರುತ್ತೆ ನಿರೀಕ್ಷೆ ಮಾಡಿದೀವಿ ಇಲ್ಲಿಯೂ ಸಚಿವ ಸಂಪುಟ ಸಭೆ ಮಾಡುವ ಚರ್ಚೆ ನಡೆದಿದೆ ಆ ಸಂದರ್ಭದಲ್ಲಿ ಸಾಕಷ್ಟು ಈ ಭಾಗದ ಅಭಿವೃದ್ಧಿಗಳಿಗೆ ಹೆಚ್ಚಿನ ಮಹತ್ವ ಕೊಡ್ತೇವೆ.‌ವಿಧೇಯಕಗಳ ಬಗ್ಗೆ ಪಾರ್ಲಿಮೆಂಟರಿ ಮಿನಿಸ್ಟರ್ ಬರ್ತಾರೆ. ಮಹದಾಯಿ ವಿವಾದ, ಭೂಸುಧಾರಣಾ ಕಾಯ್ದೆ ತಿದ್ದುಪಡಿ ಕಾಯ್ದೆ ಎಲ್ಲದರ ಬಗ್ಗೆ ಚರ್ಚೆ ಆಗಲಿ ಎಂದ ಸಿಎಂ ಬಸವರಾಜ್ ಬೊಮ್ಮಾಯಿ

Read More Articles