ಪಂಚಮಿ ದಿನ ಪ್ರತ್ಯಕ್ಷವಾದ ಹಾವು, ಪುನೀತರಾದ ಜನರು, ಸುರಕ್ಷಿತವಾಗಿ ಕಾಡಿಗೆ ಮರಳಿಸಿದ ಉರಗ ತಜ್ಞ
- 14 Jan 2024 , 11:18 PM
- Belagavi
- 94
ಬೆಳಗಾವಿ: ನಾಗರ ಪಂಚಮಿ ದಿನ ಕಾರಿನ ಎಂಜಿನ್ ನಲ್ಲಿ ಅಡಗಿ ಕುಳಿತಿದ್ದ ಸುಮಾರು ಆರು ಅಡಿ ಉದ್ದದ, ಮೂರುವರೆ ಕೆಜಿ ತೂಕದ ಹಾವನ್ನು ಸುರಕ್ಷಿತವಾಗಿ ಹಿಡಿದು ಅದನ್ನು ಕಾಡಿಗೆ ಮರಳಿಸಿದ ಘಟನೆ ಜಿಲ್ಲೆಯ ನಿಪ್ಪಾಣಿ ಪಂತನಗರದಲ್ಲಿನಡೆದಿದೆ. ನಾಗ ಪಂಚಮಿಯ ದಿನ ಕಾರಿನಲ್ಲಿ ಅಡಗಿ ಕುಳಿತಿದ್ದ ನಾಗಪ್ಪನನ್ನು ನೋಡಿದ ಸ್ಥಳೀಯರು ಭಕ್ತಿಯಿಂದ ನಮಸ್ಕರಿಸಿ ನಾಗಪ್ಪನ ದರ್ಶನ ಪಡೆದು ಪುನೀತರಾದರು. ನಂತರ ಹಾವುಗಳ ತಜ್ಞ ಬಂಡಾ ಪಾಟನಕರ್ ಹಾವನ್ನು ಹಿಡಿದು ಸುರಕ್ಷಿತವಾಗಿಕಾಡಿಗೆಬಿಡಲಾಯಿತು. ಬಂಡಾಪಾಟನಕರ್ ಕಳೆದ ಹಲವು ವರ್ಷಗಳಿಂದ ಈ ಸೇವೆ ಎಂದು ಮಾಡುತ್ತಿದ್ದು ಅವರಅನುಭವದಲ್ಲಿನೂರಾರುವಿಷಕಾರಿಜಾತಿಯಹಾವುಗಳನ್ನುಹಿಡಿದುಸುರಕ್ಷಿತವಾಗಿಕಾಡಿಗೆಮರಳಿಸಿ, ಅವುಗಳರಕ್ಷಣೆಮಾಡಿದ್ದಾನೆಈ ಉರಗ ತಜ್ಞನ ಕೆಲಸಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












