ಸದನದಲ್ಲಿ ಸರ್ಕಾರದ ಚಳಿ ಬಿಡಿಸಲು ಬೆಳಗಾವಿಗೆ ಎಂಟ್ರಿ ಕೊಟ್ಟ ಟಗರು

ಬೆಳಗಾವಿ :ಪ್ರವಾಹದ ಬಗ್ಗೆ, ಉತ್ತರ ಕರ್ನಾಟಕ ಸಮಸ್ಯೆಗಳಿವೆ, ಮನೆ ಪರಿಹಾರ, ಮತಾಂತರ ನಿಷೇಧ, ಭ್ರಷ್ಟಾಚಾರ ಇವೆಲ್ಲ ಕುರಿತು ಚರ್ಚೆ ಸದನದಲ್ಲಿ ಚರ್ಚೆ ಮಾಡಲಾಗುವುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಅವರು ಭಾನುವಾರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

promotions

ರಾಜ್ಯ ಸರಕಾರ ಭ್ರಷ್ಟಾಚಾರ ಬಗ್ಗೆ ತನಿಖೆ ಮಾಡಲಿ.ಕೃಷಿ ಕಾಯ್ದೆ ಸಂಬಸಿದಂತೆ ಎಸ್ ಟಿ ಸೋಮಶೇಖರ್ ಹೇಳಿಕೆ ವಿಚಾರಕ್ಕೆ ಮಾತಬನಾಡಿ, ಅದನ್ನು ರೈತರು ಹೇಳಬೇಕು ಅನುಕೂಲ ಆಗಿದೆ ಇಲ್ಲ ಅನ್ನೋದನ್ನು ಸೋಮಶೇಖರ ಅಲ್ಲ. ನೆರೆ ಸಂತ್ರಸ್ಥರ ಮನೆ ಪರಿಹಾರ ವಿಚಾರ.2019 ರಲ್ಲಿ ಬಿ. ಎಸ್ ವೈ ಮುಖ್ಯಮಂತ್ರಿ ಆಗಿದ್ದಾಗ ಬಿದ್ದ ಮನೆಗಳಿಗೆ ಇವತ್ತಿನ ವರೆಗೂ ಪರಿಹಾರ ಸಿಕ್ಕಿಲ್ಲ.

promotions

ಸರ್ಕಾರಕ್ಕೆ ಹಣ ಕೊರತೆ ಇದೆಯಾ ? ದುಡ್ಡೆಲ್ಲ ಏನ್ ಮಾಡಿದಿಪಾ ಅನ್ನೋದನ್ನು ನಾಳೆ ಬೊಮ್ಮಾಯಿ ಕೇಳೋನ. ಅಕಾಲಿಕ ಮಳೆಗೆ ಸುಮಾರು 6 ಲಕ್ಷ ಹೆಕ್ಟೇರ್ ಬೆಳೆ ನಾಶ ಆಗಿದೆ.

ಅಂಜಲಿ ನಿಂಬಾಳ್ಕರ್ ಪಾದಯಾತ್ರೆ ವಿಚಾರ. ನಾಳೆ ನಾನು ಒಂದು ಎರೆಡು ಕಿ.ಮೀ ಪಾದಯಾತ್ರೆಯಲ್ಲಿ ಭಾಗವಹಿಸುತ್ತೇನೆ.

Read More Articles