ರಾಮದುರ್ಗದಲ್ಲಿ ಮುಂದುವರೆದ ಕೋರೊನಾ ಕ್ರೌರ್ಯ ಇಂದು ಮತ್ತೆ 5 ಜನರಿಗೆ ಕೋರೊನಾ ಸೋಂಕು ಧೃಡ

ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ಕೋರೊನಾ ದಿನದಿಂದ ದಿನಕ್ಕೆ ತನ್ನ ಅಟ್ಟಹಾಸ ಮೆರೆಯುತ್ತಿದೆ. ಭಾರತದಾದ್ಯಂತ ದಿನದಿಂದ ದಿನಕ್ಕೆ ಕೋರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇದೆ. ಈಗ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ನಿನ್ನೆಯಷ್ಟೆ 32 ಜನರಿಗೆ ಸೋಂಕು ಧೃಡಪಟ್ಟಿತ್ತು. ನಿನ್ನೆಯ ಮಾಹಿತಿ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ 426 ಜನರಲ್ಲಿ ರಾಮದುರ್ಗ ತಾಲ್ಲೂಕಿನ 18 ಜನ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದು ಒಂದೆಡೆ ಸಂತಸವಾದರೆ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದು ದುಃಖದ ಸಂಗತಿಯಾಗಿದೆ ಜೊತೆಗೆ ಇಂದು ಮತ್ತೆ ರಾಮದುರ್ಗ ನಗರದಲ್ಲಿ 3. ಮುಳ್ಳೂರ ಗ್ರಾಮದಲ್ಲಿ 1, ಉದಪುಡಿ ಗ್ರಾಮದಲ್ಲಿ 1, ಹೀಗೆ ರಾಮದುರ್ಗ ತಾಲ್ಲೂಕಿನಲ್ಲಿ 5 ಜನರಲ್ಲಿ ಸೋಂಕು ಧೃಡಪಟ್ಟಿದೆ. ಸೋಂಕಿತರು ಪತ್ತೆಯಾದ ಪ್ರದೇಶಗಳನ್ನು ಪುರಸಭೆ ಅಧಿಕಾರಿಗಳು, ಆರೋಗ್ಯ ಇಲಾಖೆಯವರು ಸೇರಿ ಸೀಲ್ ಡೌನ್ ಮಾಡಿದ್ದಾರೆ. ಇದರಿಂದ ರಾಮದುರ್ಗ ಪಟ್ಟಣಕ್ಕೆ ಕೊರೋನಾ ಮಿತಿಮಿರಿ ಪ್ರವೇಶ ಪಡೆದಿದ್ದು ಜನರು ಹೆಚ್ಚಿನ ಜಾಗೃತಿ ವಹಿಸಬೇಕಾದ ಅನಿವಾರ್ಯತೆ ಎದುರಾಗಿದಂತರು ಸತ್ಯ.

promotions

promotions

Read More Articles