ಆದಿ ಬಣಜಿಗ ಸಮಾಜಕ್ಕೆ ‌ಮೀಸಲಾತಿ ನೀಡುವಂತೆ ಪ್ರತಿಭಟನೆ ಬೆಳಗಾವಿ

ಬೆಳಗಾವಿ :ಆದಿ ಬಣಜಿಗ ಸಮಾಜಕ್ಕೆ ಜಾತಿ ಗೇಜೆಟನಲ್ಲಿ‌ ಸೇರಿಸಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಗುರುವಾರ ಅಖಿಲ ಭಾರತ ಆದಿ ಬಣಜಿಗ ಯುವ ವೇದಿಕೆಗಳ ಒಕ್ಕೂಟ ಪ್ರತಿಭಟನೆ‌ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿದರು.

promotions

ಕಳೆದ ಮೂರ್ನಾಲ್ಕು ದಶಕಗಳಿಂದ ನಿರಂತರ ಹೋರಾಟದ ಫಲವಾಗಿ ಈ ಹಿಂದೆ ಸರಕಾರ 2009ರಲ್ಲಿ ವೀರಶೈವ ಲಿಂಗಾಯತ 19 ಉಪಜಾತಿಗಳಲ್ಲಿ ವೀರಶೈವ ಆದಿ ಬಣಜಿಗ‌ ಜಾತಿಯನ್ನು ಗೆಜೆಟ್ ನಲ್ಲಿ ಸೇರ್ಪಡೆ ಮಾಡಿ 3ಬಿಗೆ ನಿಗದಿಪಡಿಸಿತ್ತು.

promotions

ಆದರೆ ಬಳಿಕ ಬಂದ ಸರಕಾರ ಅದನ್ನು ಹಿಂಪಡೆದು ವೀರಶೈವ ಆದಿ ಬಣಜಿಗ ಸಮಾಜದಿಂದ ಕೈ ಬಿಟ್ಟಿದ್ದು ಖಂಡಿಸಿದ್ದಾರೆ. ಸುರೇಶ ಗಚ್ಚಿನಕಟ್ಟಿ ಸೇರಿದಂತೆ ಇನ್ನಿತರರು ‌ಉಪಸ್ಥಿತರಿದ್ದರು.

Read More Articles